ADVERTISEMENT

ಮಹಿಳೆಯರ ಹಕ್ಕು ರಕ್ಷಣೆ: ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2015, 19:35 IST
Last Updated 1 ಸೆಪ್ಟೆಂಬರ್ 2015, 19:35 IST

ವಿಶ್ವಸಂಸ್ಥೆ (ಪಿಟಿಐ): ಮಹಿಳೆಯರ ಹಕ್ಕು ಗಳ ರಕ್ಷಣೆ ಮತ್ತು ಲಿಂಗ ತಾರತಮ್ಯ ನಿವಾ ರಣೆಯಲ್ಲಿ ಭಾರತದ ಸಂಸತ್ತು ವಹಿ ಸುತ್ತಿರುವ ಪಾತ್ರದ ಕುರಿತು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್‌ ಕಿ–ಮೂನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಹಿಳಾ ಸ್ಪೀಕರ್‌ಗಳ ನಾಲ್ಕನೇ ವಿಶ್ವ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಭಾರತದ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾ ಜನ್‌ ಹಾಗೂ ರಾಜ್ಯ ಸಭೆ ಉಪ ಸಭಾಪತಿ ಪಿ.ಜೆ. ಕುರಿಯನ್‌ ಅವರೊಂದಿಗೆ ಸೋಮವಾರ ಬಾನ್ ಕಿ–ಮೂನ್ ಚರ್ಚೆ ನಡೆಸಿದರು. ಮಹಿಳೆಯರ ಮೇಲಿನ ಹಿಂಸಾತ್ಮಕ ದೌರ್ಜನ್ಯ ತಡೆಗಟ್ಟುವಲ್ಲಿ ಭಾರತ ಕೈಗೊಳ್ಳು ತ್ತಿರುವ ಕ್ರಮಗಳ ಕುರಿತು ಶ್ಲಾಘಿಸಿದ ಮೂನ್, ಹವಾಮಾನ ಬದಲಾವಣೆ ಒಪ್ಪಂದ ಹಾಗೂ ಸುಸ್ಥಿರ ಅಭಿವೃದ್ಧಿ ಬಗ್ಗೆ ಕೂಡಾ ಚರ್ಚಿಸಿದರು.

‘ಆರ್ಥಿಕಾಭಿವೃದ್ಧಿ; ಲಿಂಗ ಸಮಾನತೆ’ ಗೋಷ್ಠಿಯಲ್ಲಿ ಮಾತನಾಡಿದ ಸುಮಿತ್ರಾ ಮಹಾಜನ್, ಸಂಸತ್ತಿನ ವಿವಿಧ ಸಮಿತಿ ಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚ ಬೇಕು. ಸದನದಲ್ಲಿ ಮಹಿಳಾ ಸಮಾನತೆ ಕುರಿತ ಚರ್ಚೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಿವಾ ರಣೆಗೆ ನೇರ ಮಾತುಕತೆಯ ಅಗತ್ಯವಿದೆ ಎಂದು ಬಾನ್ ಕಿ–ಮೂನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.