ADVERTISEMENT

ಮಾಂಸ ಸೇವನೆ: ಗಣೇಶನ ಜಾಹೀರಾತು ಹಿಂದಕ್ಕೆ

ಪಿಟಿಐ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ವಿವಾದಿತ ಜಾಹೀರಾತು
ವಿವಾದಿತ ಜಾಹೀರಾತು   

ಮೆಲ್ಬರ್ನ್‌: ಗಣೇಶ ಹಾಗೂ ಇತರ ದೇವತೆಗಳು ಕುರಿ ಮಾಂಸ ತಿನ್ನುತ್ತಿರುವಂತೆ ಬಿಂಬಿಸಿ ಇಲ್ಲಿ ಪ್ರಕಟಗೊಂಡ ಜಾಹೀರಾತಿಗೆ ವ್ಯಾಪಕ ಪ್ರತಿರೋಧ ವ್ಯಕ್ತವಾದ ಬೆನ್ನಲ್ಲಿ, ಈ ಜಾಹೀರಾತು ದೇಶದ ‘ಜಾಹೀರಾತು ಗುಣಮಟ್ಟದ ಸಂಹಿತೆ’ಗೆ ವಿರುದ್ಧವಾಗಿದೆ ಎಂದು ಆಸ್ಟ್ರೇಲಿಯಾ ಜಾಹೀರಾತು ಕಾವಲು ಸಮಿತಿ ಹೇಳಿದೆ.

ಈ ಜಾಹೀರಾತನ್ನು ಆಸ್ಟ್ರೇಲಿಯಾ ಮಾಂಸ ಮತ್ತು ಜಾನುವಾರು ಸಂಘ ಕಳೆದ ತಿಂಗಳು ಬಿಡುಗಡೆ ಮಾಡಿತ್ತು. ಇದಕ್ಕೆ ಆಸ್ಟ್ರೇಲಿಯಾದ ಹಿಂದೂ ಸಮುದಾಯ ಆಕ್ರೋಶ ವ್ಯಕ್ತಪಡಿಸಿ ಜಾಹೀರಾತನ್ನು ಕೂಡಲೇ ವಾಪಸ್‌ ಪಡೆಯುವಂತೆ ಆಗ್ರಹಿಸಿತ್ತು.

’ನಿಮ್ಮ ನಂಬಿಕೆ, ಹಿನ್ನೆಲೆ ಹಾಗೂ ಗ್ರಹಿಕೆಗಳು ಏನೇ ಇರಲಿ, ಕುರಿ ಮಾಂಸದ ವಿಚಾರದಲ್ಲಿ ಮಾತ್ರ ಎಲ್ಲರೂ ಒಂದಾಗುತ್ತಾರೆ ಎಂಬುದನ್ನು ಪ್ರಚುರಪಡಿಸುವುದಷ್ಟೇ ನಮ್ಮ ಉದ್ದೇಶ’ ಎಂದು ಸಂಘದ ಮಾರುಕಟ್ಟೆ ವ್ಯವಸ್ಥಾಪಕ ಆ್ಯಂಡ್ರ್ಯೂ ಹೋವಿ ಪ್ರತಿಕ್ರಿಯಿಸಿದ್ದರು. ಇದನ್ನೇ ಬೆಂಬಲಿಸಿದ್ದ ಸಮಿತಿ, ಈ ಜಾಹೀರಾತಿನಲ್ಲಿ ಯಾವುದೇ ಲೋಪವಿಲ್ಲ’ ಎಂದಿತ್ತು. ಆದರೆ ಇದೀಗ, ಜಾಹೀರಾತು ಕಾನೂನಿಗೆ ವಿರುದ್ಧವಾಗಿರುವುದಾಗಿ ಹೇಳುವ ಮೂಲಕ ತನ್ನ ಮಾತನ್ನು ಹಿಂದಕ್ಕೆ ಪಡೆದಿದೆ.

ADVERTISEMENT

’ಕೂಡಲೇ ಈ ಜಾಹೀರಾತನ್ನು ವಾಪಸ್‌ ಪಡೆಯಬೇಕು ಹಾಗೂ ಎಲ್ಲಿಯೂ ಇದನ್ನು ಪ್ರಕಟಿಸಬಾರದು’ ಎಂದು ಸಮಿತಿ ಸಂಘಕ್ಕೆ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.