ADVERTISEMENT

ಮಾನವೀಯ ನೆಲೆಯಲ್ಲಿ ಭಾರತದ 291 ಮೀನುಗಾರರ ಬಿಡುಗಡೆ: ಪಾಕಿಸ್ತಾನ ಪ್ರಕಟಣೆ

ಏಜೆನ್ಸೀಸ್
Published 21 ಡಿಸೆಂಬರ್ 2017, 14:13 IST
Last Updated 21 ಡಿಸೆಂಬರ್ 2017, 14:13 IST
ಮಾನವೀಯ ನೆಲೆಯಲ್ಲಿ ಭಾರತದ 291 ಮೀನುಗಾರರ ಬಿಡುಗಡೆ: ಪಾಕಿಸ್ತಾನ ಪ್ರಕಟಣೆ
ಮಾನವೀಯ ನೆಲೆಯಲ್ಲಿ ಭಾರತದ 291 ಮೀನುಗಾರರ ಬಿಡುಗಡೆ: ಪಾಕಿಸ್ತಾನ ಪ್ರಕಟಣೆ   

ಇಸ್ಲಾಮಾಬಾದ್‌: ಮಾನವೀಯ ನೆಲೆಯಲ್ಲಿ ಮುಂದಿನ ವಾರದ ನಂತರ ಎರಡು ಹಂತಗಳಲ್ಲಿ ಭಾರತದ ಒಟ್ಟು 291 ಮೀನುಗಾರರನ್ನು ಬಿಡುಗಡೆ ಮಾಡಲಾಗುವುದು ಎಂದು ಪಾಕಿಸ್ತಾನ ಹೇಳಿದೆ.

‘ಭಾರತದ 291 ಮೀನುಗಾರರನ್ನು ಬಿಡುಗಡೆಗೊಳಿಸಲು ಪಾಕಿಸ್ತಾನ ನಿರ್ಧರಿಸಿದೆ. ಸನ್ನಡತೆ ಕಾರಣದಿಂದ ಮಾನವೀಯ ನೆಲೆಯಲ್ಲಿ ಇದೇ ಡಿಸೆಂಬರ್‌ 29 ಹಾಗೂ 2018ರ ಜನವರಿ 8 ರಂದು ಎರಡು ಹಂತಗಳಲ್ಲಿ ವಾಘಾ ಗಡಿ ಪ್ರದೇಶದ ಮೂಲಕ ಬಿಡುಗಡೆ ಮಾಡಲಾಗುವುದು’ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ‌ಡಾ.ಮೊಹಮದ್‌ ಫೈಸಾಲ್‌ ತಿಳಿಸಿದ್ದಾರೆ.

ಪಾಕಿಸ್ತಾನ ಮಾನವೀಯ ಸಮಸ್ಯೆಗಳನ್ನು ರಾಜಕೀಯವಾಗಿಸದೆ ಸುಗಮವಾಗಿ ಬಗೆಹರಿಸಬೇಕು ಎಂಬ ನಿಲುವನ್ನು ಹೊಂದಿದೆ ಎಂದು ಫೈಸಲ್‌ ಅಭಿಪ್ರಾಯಪಟ್ಟರು.

ADVERTISEMENT

ಇದೇ ವರ್ಷದ ಅಕ್ಟೋಬರ್‌ನಲ್ಲಿ 68 ಮೀನುಗಾರರನ್ನು ಪಾಕಿಸ್ತಾನ ಬಿಡುಗಡೆ ಮಾಡಿತ್ತು.

ಭಾರತ ಹಾಗೂ ಪಾಕಿಸ್ತಾನ ಸ್ಪಷ್ಟವಾಗಿ ವಿವರಿಸಲ್ಪಟ್ಟ ಜಲಗಡಿಯನ್ನು ಹೊಂದಿಲ್ಲ. ಹೀಗಾಗಿ ಉಭಯ ದೇಶಗಳ ಮೀನುಗಾರರನ್ನು ಅಕ್ರಮವಾಗಿ ಗಡಿ ಪ್ರವೇಶಿಸಿದ ಆರೋಪದ ಮೇಲೆ ಬಂಧಿಸಲಾಗುತ್ತದೆ.

ಪಾಕಿಸ್ತಾನ ಸಾಗರ ಭದ್ರತಾ ಪಡೆಯ ವಕ್ತಾರರೊಬ್ಬರು, ಈ ವರ್ಷ ಭಾರತದ ಒಟ್ಟು 400 ಮೀನುಗಾರರನ್ನು ಬಂಧಿಸಿದ್ದೇವೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.