ADVERTISEMENT

ಮಾನವ ಹಕ್ಕು ಉಲ್ಲಂಘನೆ: ಅಮೆರಿಕ ವರದಿಗೆ ಉತ್ತರ ಕೊರಿಯಾ ಖಂಡನೆ

ಏಜೆನ್ಸೀಸ್
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST

ಸೋಲ್: ಉತ್ತರಕೊರಿಯಾದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗಿರುವುದಾಗಿ ಅಮೆರಿಕ ನೀಡಿರುವ ವರದಿಯು ಹಾಸ್ಯಾಸ್ಪದವಾಗಿದೆ ಎಂದು ಉತ್ತರ ಕೊರಿಯಾ ಹೇಳಿದೆ.

ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ–ಇನ್ ಮತ್ತು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರ ಮಧ್ಯೆ ಇದೇ ಶುಕ್ರವಾರ ಸಭೆ ನಡೆಯಲಿದೆ. ಅದಕ್ಕೂ ಮುನ್ನ ಬಂದ ಉತ್ತರ ಕೊರಿಯಾದ ಪ್ರತಿಕ್ರಿಯೆ ಗಮನ ಸೆಳೆದಿದೆ.

‘ಉತ್ತರ ಕೊರಿಯಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಅತಿಯಾಗಿದೆ’ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖಿಸಿತ್ತು.

ADVERTISEMENT

‘ಕೆಲವೊಮ್ಮೆ ಟೀಕೆಗಳು ಮಾತುಕತೆಯ ವಾತಾವರಣವನ್ನೇ ಕೆಡಿಸುತ್ತದೆ’ ಎಂದು ಉತ್ತರ ಕೊರಿಯಾ ಹೇಳಿದೆ.

ಟ್ರಂಪ್‌ಗೆ ವಿವರಣೆ: ‘ಶುಕ್ರವಾರದ ಭೇಟಿಯ ನಂತರ ಮೂನ್ ಅವರು ಟ್ರಂಪ್‌ಗೆ ದೂರವಾಣಿ ಮೂಲಕ ವಿವರಣೆ ನೀಡಲಿದ್ದಾರೆ’ ಎಂದು ಉತ್ತರ ಕೊರಿಯಾ ಹೇಳಿದೆ. ಅಲ್ಲದೆ, ಅಮೆರಿಕದೊಂದಿಗೆ ನಿಕಟ ಸಹಯೋಗ ಹೊಂದುವುದಾಗಿಯೂ ಅದು ತಿಳಿಸಿದೆ.

ಉತ್ತರ ಕೊರಿಯಾ ಅಣ್ವಸ್ತ್ರಗಳನ್ನು ನಾಶ ಮಾಡಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.