ADVERTISEMENT

ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ ಗೃಹ ಬಂಧನ 30 ದಿನ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2017, 14:20 IST
Last Updated 19 ಅಕ್ಟೋಬರ್ 2017, 14:20 IST
ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ ಗೃಹ ಬಂಧನ 30 ದಿನ ವಿಸ್ತರಣೆ
ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ ಗೃಹ ಬಂಧನ 30 ದಿನ ವಿಸ್ತರಣೆ   

ಲಾಹೋರ್‌: ಮುಂಬೈ ದಾಳಿಯ ಸಂಚುಕೋರ ಹಾಗೂ ಜಮಾತ್‌ ಉದ್ ದವಾ ಮುಖ್ಯಸ್ಥ ಹಫೀಜ್‌ ಸಯೀದ್‌ ಗೃಹ ಬಂಧನವನ್ನು 30 ದಿನ ವಿಸ್ತಾರಿಸಲಾಗಿದೆ.

ಪಾಕಿಸ್ತಾನ ಪಂಜಾಬ್‌ ಪ್ರಾಂತ್ಯದ ಲಾಹೋರ್‌ ಹೈಕೋರ್ಟ್‌ ನ್ಯಾಯಾಂಗ ಪರಿಶೀಲನಾ ಮಂಡಳಿ ಗುರುವಾರ ಹಫೀಜ್‌ ಗೃಹ ಬಂಧನ ಅವಧಿಯನ್ನು 30 ದಿನಗಳ ವರೆಗೆ ವಿಸ್ತರಿಸಿದ್ದು, ಅ.24ರಿಂದ ಈ ಆದೇಶ ಅನ್ವಯವಾಗಲಿದೆ.

ಆತನ ನಾಲ್ವರು ಸಹಚರರ ಬಂಧನ ವಿಸ್ತರಣೆ ಮನವಿಯನ್ನು ತಿರಸ್ಕರಿಸಿದೆ.

ADVERTISEMENT

ಭಯೋತ್ಪಾದನಾ ನಿಗ್ರಹ ಕಾಯ್ದೆ(ಎಟಿಎ) ಅಡಿಯಲ್ಲಿ ಹಫೀಜ್‌ನನ್ನು ಬಂಧಿಸಲಾಗಿತ್ತು. ಕಳೆದ ಜನವರಿ 31ರಿಂದ ಗೃಹ ಬಂಧನದಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.