ADVERTISEMENT

ಮುಕೇಶ್ ವಿಶ್ವದ 18ನೇ ಸಿರಿವಂತ

​ಪ್ರಜಾವಾಣಿ ವಾರ್ತೆ
Published 3 ಜನವರಿ 2013, 19:59 IST
Last Updated 3 ಜನವರಿ 2013, 19:59 IST

ಹ್ಯೂಸ್ಟನ್ (ಪಿಟಿಐ): ಬ್ಲೂಮ್‌ಬರ್ಗ್ ಬಿಲಿಯನೇರ್ಸ್‌ ಸಿದ್ದಪಡಿಸಿರುವ 2012ನೇ ವರ್ಷದ ವಿಶ್ವದ 100 ಸಿರಿವಂತರ ಪಟ್ಟಿಯಲ್ಲಿ 1.36 ಲಕ್ಷ  ಕೋಟಿ ರೂಪಾಯಿ (2470 ಕೋಟಿ ಡಾಲರ್) ವೈಯಕ್ತಿಕ ಸಂಪತ್ತು ಹೊಂದಿರುವ ರಿಲಯನ್ಸ್ ಉದ್ಯಮಗಳ ಮುಖ್ಯಸ್ಥ ಮುಕೇಶ್ ಅಂಬಾನಿ 18ನೇ ಸ್ಥಾನ ಪಡೆದಿದ್ದಾರೆ.

ಕಳೆದ ವರ್ಷ ವಿಶ್ವದ ಅತ್ಯಂತ ಸಿರಿವಂತ ಎಂಬ ಪಟ್ಟ ಅಲಂಕರಿಸಿದ್ದ  ಮೆಕ್ಸಿಕೊದ ಟೆಲಿಕಮ್ಯೂನಿಕೇಷನ್ ಕ್ಷೇತ್ರದ ದಿಗ್ಗಜ ಕಾರ್ಲೊಸ್ ಸ್ಲಿಮ್, ಈ  ಬಾರಿಯೂ ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಅಲ್ಲದೆ, ರಿಲಯನ್ಸ್ ಸಮೂಹದ ಉದ್ಯಮಗಳ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಮುಕೇಶ್ ಅಂಬಾನಿ, ಸತತ ಆರನೇ ಬಾರಿ ಭಾರತದ ಅತ್ಯಂತ ಸಿರಿವಂತ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದ್ದಾರೆ ಎಂಬ ಅಂಶವನ್ನೂ ಪಟ್ಟಿ ಹೊರಹಾಕಿದೆ.

ಉಳಿದಂತೆ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಝರಾ ಫ್ಯಾಶನ್ ಚಿಲ್ಲರೆ ಉದ್ಯಮದ ಸಂಸ್ಥಾಪಕ  ಅಮಾನ್ಸಿಯೊ ಒರ್ಟೆಗಾ ಕ್ರಮವಾಗಿ  ಟಾಪ್ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಪಟ್ಟಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.