ADVERTISEMENT

ಮೊದಲ ಅಮೆರಿಕನ್‌ ಜಿಹಾದಿ ಸಾವು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2014, 10:22 IST
Last Updated 27 ಆಗಸ್ಟ್ 2014, 10:22 IST

ವಾಷಿಂಗ್ಟನ್‌ (ಪಿಟಿಐ): ಕ್ರೈಸ್ತ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡು ಜಿಹಾದಿ ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಮೊದಲ ಅಮೆರಿಕನ್‌ ಡಗ್ಲಾಸ್‌ ಮ್ಯಾಕ್‌ ಆಥರ್‌ (33) ಸಿರಿಯಾದಲ್ಲಿ ಸಾವನ್ನಪ್ಪಿದ್ದಾನೆ.

ಸಿರಿಯಾದಲ್ಲಿ ನಡೆಯುತ್ತಿರುವ ಐಎಸ್‌ಐಎಲ್‌ ಪ್ರತ್ಯೇಕತಾವಾದಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಆತ ಸಾವನ್ನಪ್ಪಿರುವುದನ್ನು ಶ್ವೇತಭವನ ಖಚಿತ ಪಡಿಸಿದೆ.

ಕ್ಯಾಲಿಫೋರ್ನಿಯಾ ಮೂಲದ ಡಗ್ಲಾಸ್‌ ಅಮೆರಿಕದಿಂದ ದೂರಾಗಿ ಉಗ್ರಗಾಮಿಗಳೊಂದಿಗೆ ಸೇರಿದ್ದು ಹಾಗೂ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಗ್ಗೆ ಮಾಹಿತಿ ಇತ್ತು. ಆತ ಸಾವನ್ನಪ್ಪಿರುವುದು ಖಚಿತವಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಪರಿಷತ್‌ನ (ಎನ್‌ಎಸ್‌ಸಿ) ವಕ್ತಾರ ಕೇಟ್ಲಿನ್‌ ಹೇಡನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT