ADVERTISEMENT

ಮೊಬೈಲ್‌ಗೂ ಎ.ಸಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 20:18 IST
Last Updated 4 ಜುಲೈ 2015, 20:18 IST

ವಾಷಿಂಗ್ಟನ್ (ಪಿಟಿಐ): ಕಾರಿನೊಳಗಿನ ಉಷ್ಣತೆ ಹೆಚ್ಚಿದಂತೆ, ಹೆಚ್ಚು ಬಿಸಿಯಾಗುವ ಸ್ಮಾರ್ಟ್‌ಫೋನ್‌ಗಳ ರಕ್ಷಣೆಗೆಂದೇ ಸಣ್ಣ ಹವಾನಿಯಂತ್ರಕ ಒಂದನ್ನು ಅಮೆರಿಕದ ಆಟೊಮೊಬೈಲ್ ದೈತ್ಯ ಸಂಸ್ಥೆ ಷೆವರ್ಲೆ ಅಭಿವೃದ್ಧಿಪಡಿಸಿದೆ.

ಅತಿ ಬಿಸಿಯಾದಲ್ಲಿ ಸ್ಮಾರ್ಟ್‌ಫೋನ್‌ನ ದಕ್ಷತೆ ಮತ್ತು ಅದರ ಬ್ಯಾಟರಿಯ ಜೀವಿತಾವಧಿ ಕುಗ್ಗುತ್ತದೆ. ಇದನ್ನು ತಡೆಯುವ ಸಲುವಾಗಿ ಕಾರಿನ ಹವಾನಿಯಂತ್ರಕಕ್ಕೇ ಹೊಂದಿಕೊಂಡ ‘ಆ್ಯಕ್ಟೀವ್ ಫೋನ್ ಕೂಲಿಂಗ್’ ಅನ್ನು ತನ್ನ ವಾಹನಗಳಲ್ಲಿ ಅಳವಡಿಸಲು ಷೆವರ್ಲೆ ಮುಂದಾಗಿದೆ.  2016ರ ನಂತರ ಷೆವರ್ಲೆಯ ಇಂಪಾಲ, ಮಾಲಿಬು, ವೋಲ್ಟ್ ಮತ್ತು ಕ್ರೂಸ್ ಕಾರುಗಳಲ್ಲಿ ‘ಆ್ಯಕ್ಟೀವ್ ಫೋನ್ ಕೂಲಿಂಗ್’ ಸೌಕರ್ಯ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.