ADVERTISEMENT

‘ರೋಹಿಂಗ್ಯಾ ಸಮುದಾಯದ ಉಗ್ರರಿಂದ ಹಿಂದೂಗಳ ಹತ್ಯೆ’

ಏಜೆನ್ಸೀಸ್
Published 23 ಮೇ 2018, 19:30 IST
Last Updated 23 ಮೇ 2018, 19:30 IST
‘ರೋಹಿಂಗ್ಯಾ ಸಮುದಾಯದ ಉಗ್ರರಿಂದ ಹಿಂದೂಗಳ ಹತ್ಯೆ’
‘ರೋಹಿಂಗ್ಯಾ ಸಮುದಾಯದ ಉಗ್ರರಿಂದ ಹಿಂದೂಗಳ ಹತ್ಯೆ’   

ಯಾಂಗೂನ್‌ (ಎಎಫ್‌ಪಿ): ಮ್ಯಾನ್ಮಾರ್‌ನ ರಾಖೈನ್‌ ಪ್ರಾಂತ್ಯದಲ್ಲಿ ಕಳೆದ ವರ್ಷ ನಡೆದ ಗಲಭೆ ಸಂದರ್ಭದಲ್ಲಿ ರೋಹಿಂಗ್ಯಾ ಸಮುದಾಯದ ಉಗ್ರರು ಹಿಂದೂಗಳ ಹತ್ಯೆ ಮಾಡಿದ್ದಾರೆ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಹೇಳಿದೆ.

ಸಂಸ್ಥೆ ಈ ಸಂಬಂಧ ಸಲ್ಲಿಸಿರುವ ವರದಿಯು ಮ್ಯಾನ್ಮಾರ್‌ನಲ್ಲಿನ ಜನಾಂಗೀಯ ದ್ವೇಷದ ಮೇಲೆ ಬೆಳಕು ಚೆಲ್ಲಿದೆ. 2017ರ ಆಗಸ್ಟ್‌ 25ರಂದು ಹಿಂದೂಗಳ ಹತ್ಯೆ ಮಾಡಿದ ರೋಹಿಂಗ್ಯಾ ಉಗ್ರರು, ಪೊಲೀಸ್‌ ಠಾಣೆಗಳ ಮೇಲೆಯೂ ದಾಳಿ ಮಾಡಿದರು. ಈ ಸಂಘಟಿತ ದಾಳಿಯಿಂದಾಗಿ ದೇಶದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಯಿತು ಎಂದು ವಿವರಿಸಿದೆ.

ಆಮ್ನೆಸ್ಟಿ ಇಂಟರ್‌ನ್ಯಾಷನಲ್‌, ರೋಹಿಂಗ್ಯಾ ಉಗ್ರರ ದಾಳಿಯಿಂದ ತಪ್ಪಿಸಿಕೊಂಡು ಬದುಕುಳಿದವರ ಪೈಕಿ 8 ಜನರ ಸಂದರ್ಶನ ನಡೆಸಿದೆ. ‘ಹಲವಾರು ಜನ ಮುಸುಕುಧಾರಿಗಳು ಹಾಗೂ ಗ್ರಾಮದ ರೋಹಿಂಗ್ಯಾಗಳು ನಮ್ಮವರನ್ನು ಸುತ್ತುವರಿದರು. ನಮ್ಮವರ ಕಣ್ಣಿಗೆ ಬಟ್ಟೆ ಕಟ್ಟಿ, ಗ್ರಾಮದಿಂದ ಹೊರಗೆ ಕರೆದುಕೊಂಡು ಹೋದರು. ನಮ್ಮವರತ್ತ ನೋಡದಂತೆ ತಾಕೀತು ಮಾಡಿದರು. ಚಾಕು, ಕಬ್ಬಿಣದ ಸರಳು, ಗುದ್ದಲಿಯಿಂದ ನಮ್ಮವರನ್ನು ಹತ್ಯೆ ಮಾಡಿದರು’ ಎಂದು 18 ವರ್ಷದ ರಾಜಕುಮಾರ ತಿಳಿಸಿದ್ದಾಗಿ ಸಂಸ್ಥೆ ವರದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.