ADVERTISEMENT

ಲಂಡನ್‌ ದಾಳಿ: ಐಎಸ್‌ ಹೊಣೆ

ಪಿಟಿಐ
Published 23 ಮಾರ್ಚ್ 2017, 21:07 IST
Last Updated 23 ಮಾರ್ಚ್ 2017, 21:07 IST
ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಪೊಲೀಸ್‌ ಅಧಿಕಾರಿಯ ಭಾವಚಿತ್ರದ ಬಳಿ ಮಹಿಳಾ ಅಧಿಕಾರಿಯೊಬ್ಬರು ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿದರು  -
ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಪೊಲೀಸ್‌ ಅಧಿಕಾರಿಯ ಭಾವಚಿತ್ರದ ಬಳಿ ಮಹಿಳಾ ಅಧಿಕಾರಿಯೊಬ್ಬರು ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿದರು -   

ಲಂಡನ್‌: ಬ್ರಿಟನ್‌ ಸಂಸತ್‌ ಬಳಿ ಬುಧವಾರ ನಡೆದ ಭಯೋತ್ಪಾದಕ ದಾಳಿಯ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್‌ (ಐ.ಎಸ್‌) ಸಂಘಟನೆ ಹೊತ್ತುಕೊಂಡಿದೆ.

‘ನಮ್ಮ ಯೋಧನೊಬ್ಬ ಈ ದಾಳಿ ನಡೆಸಿದ್ದಾನೆ. ಅಮೆರಿಕದ ಮಿತ್ರಪಡೆಗಳನ್ನು ಗುರಿಯಾಗಿಸಬೇಕು ಎಂಬ ಕರೆಗೆ ಓಗೊಟ್ಟು ಈ ದಾಳಿ ಎಸಗಿದ್ದಾನೆ’ ಎಂದು ಸಂಘಟನೆಯ ಸುದ್ದಿಸಂಸ್ಥೆ ‘ಅಮಾಕ್‌’ ಗುರುವಾರ ವರದಿ ಮಾಡಿದೆ.

ಪಾದಚಾರಿಗಳ ಮೇಲೆ ಕಾರು ಹರಿಸಿ, ಬ್ರಿಟನ್‌ ಸಂಸತ್‌ ಆವರಣಕ್ಕೆ ನುಗ್ಗಲು ಯತ್ನಿಸಿದ್ದ ದಾಳಿಕೋರನನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದರು.
ದಾಳಿಕೋರನನ್ನು 52ರ ಹರೆಯದ ಖಾಲಿದ್‌ ಮಸೂದ್‌ ಎಂದು ಪೊಲೀಸರು ಗುರುತಿಸಿದ್ದಾರೆ.  ಘಟನೆಯಲ್ಲಿ ಪೊಲೀಸ್‌ ಅಧಿಕಾರಿ ಸೇರಿದಂತೆ ನಾಲ್ವರು ಬಲಿಯಾಗಿದ್ದರು.

ಎಂಟು ಬಂಧನ: ದಾಳಿಯ ಬೆನ್ನಲ್ಲೇ ಸ್ಕಾಟ್ಲೆಂಡ್‌ ಯಾರ್ಡ್‌ ಪೊಲೀಸರು ಲಂಡನ್‌ ಮತ್ತು ಬರ್ಮಿಂಗ್‌ಹ್ಯಾಂನಲ್ಲಿ ವ್ಯಾಪಕ ಕಾರ್ಯಾಚರಣೆ ನಡೆಸಿದ್ದು,  ಎಂಟು ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

‘ಅಪರಾಧ ಹಿನ್ನೆಲೆ ಹೊಂದಿದ್ದ’
ಲಂಡನ್‌ (ರಾಯಿಟರ್ಸ್‌): ದಾಳಿಕೋರ ಖಾಲಿದ್‌ ಮಸೂದ್‌ ಈ ಹಿಂದೆ ಹಲವು ಅಪರಾಧ ಕೃತ್ಯಗಳಲ್ಲಿ ಶಿಕ್ಷೆ ಅನುಭವಿಸಿದ್ದ. ಆದರೆ ಭಯೋತ್ಪಾದನೆಗೆ ಸಂಬಂಧಿಸಿದ ಯಾವುದೇ ಪ್ರಕರಣ ಆತನ ವಿರುದ್ಧ ದಾಖಲಾಗಿರಲಿಲ್ಲ ಎಂದು ಲಂಡನ್‌ ಪೊಲೀಸರು ತಿಳಿಸಿದ್ದಾರೆ.

ಆಗ್ನೇಯ ಲಂಡನ್‌ನ ಕೆಂಟ್‌ನಲ್ಲಿ ಜನಿಸಿದ್ದ ಆತ ಪ್ರಸ್ತುತ ಕೇಂದ್ರ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿದ್ದ ಎಂದು ಮಾಹಿತಿ ನೀಡಿದ್ದಾರೆ. ‘1983 ರ ನವೆಂಬರ್‌ನಲ್ಲಿ ಆತನ ವಿರುದ್ಧ ಮೊದಲ ಕ್ರಿಮಿನಲ್‌ ಪ್ರಕರಣ ದಾಖಲಾಗಿದ್ದರೆ, 2003 ರಲ್ಲಿ ಕೊನೆಯ  ಪ್ರಕರಣ ದಾಖಲಾಗಿತ್ತು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT