ADVERTISEMENT

ವಲಸೆ ಒಪ್ಪಂದ: ಅಮೆರಿಕ ಹೊರಕ್ಕೆ

ಪಿಟಿಐ
Published 3 ಡಿಸೆಂಬರ್ 2017, 19:30 IST
Last Updated 3 ಡಿಸೆಂಬರ್ 2017, 19:30 IST

ವಿಶ್ವಸಂಸ್ಥೆ : ಜಾಗತಿಕ ವಲಸೆ ಒಪ್ಪಂದದಿಂದ ತಾನು ಹೊರಬಂದಿರುವುದಾಗಿ ಅಮೆರಿಕ ಭಾನುವಾರ ಘೋಷಿಸಿದೆ. ಬರಾಕ್ ಒಬಾಮ ಆಡಳಿತ ಅವಧಿಯ ವಲಸೆ ಮತ್ತು ನಿರಾಶ್ರಿತರ ನೀತಿಗೂ ಡೊನಾಲ್ಡ್ ಟ್ರಂಪ್ ಅವಧಿಯ ನೀತಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಅಮೆರಿಕ ಕಾರಣ ನೀಡಿದೆ.

‘ಅಮೆರಿಕದ ವಲಸಿಗರ ಪರಂಪರೆ, ನಿರಾಶ್ರಿತರು ಹಾಗೂ ವಲಸಿಗರಿಗೆ ಒತ್ತಾಸೆಯಾಗುವ ಅಮೆರಿಕದ ನೈತಿಕ ನಾಯಕತ್ವದ ಬಗ್ಗೆ ನಮಗೆ ಹೆಮ್ಮೆಯಿದೆ. ವಲಸಿಗರಿಗೆ ನಮ್ಮ ದೇಶ ನೀಡಿದಷ್ಟು ಬೆಂಬಲವನ್ನು ಬೇರಾವ ದೇಶವೂ ನೀಡಿಲ್ಲ’ ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿರುವ ನಿಕ್ಕಿ ಹ್ಯಾಲೆ ಹೇಳಿದ್ದಾರೆ.

‘ಅಮೆರಿಕಕ್ಕೆ ಸಂಬಂಧಿಸಿದ ವಲಸೆ ನೀತಿಯನ್ನು ಅಮೆರಿಕದ ಜನರೇ ನಿರ್ಧರಿಸುತ್ತಾರೆ ಮತ್ತು ಅಮೆರಿಕನ್ನರು ಮಾತ್ರ ನಿರ್ಧರಿಸುತ್ತಾರೆ. ನಮ್ಮ ಗಡಿಯನ್ನು ಹೇಗೆ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಮತ್ತು ಯಾರನ್ನು ದೇಶದೊಳಕ್ಕೆ ಬಿಟ್ಟುಕೊಳ್ಳಬೇಕು ಎಂಬುದನ್ನು ನಾವೇ ನಿರ್ಧರಿಸುತ್ತೇವೆ. ಜಾಗತಿಕ ನೆಲೆಯಲ್ಲಿ ಕೈಗೊಂಡ ವಿಶ್ವಸಂಸ್ಥೆಯ ನಿರ್ಧಾರವು ಅಮೆರಿಕದ ಸಾರ್ವಭೌಮತ್ವಕ್ಕೆ ತಕ್ಕುದಾಗಿಲ್ಲ’ ಎಂದು ಅವರು ಹೇಳಿದ್ದಾರೆ.

ADVERTISEMENT

2016ರಲ್ಲಿ ಒಬಾಮ ಆಡಳಿತದಲ್ಲಿ ಈ ಒಪ್ಪಂದಕ್ಕೆ ಅಮೆರಿಕ ಸಹಿ ಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.