ವಾಷಿಂಗ್ಟನ್ (ಎಎಫ್ಪಿ): ಮಾದಕ ವಸ್ತು ಸೇವನೆ ಮತ್ತು ವಿವಿಧ ಹಗರಣಗಳಿಂದ ಜೈಲುಶಿಕ್ಷೆಗೆ ಒಳಗಾಗಿದ್ದ ಇಲ್ಲಿನ ವಿವಾದಾತ್ಮಕ ಮಾಜಿ ಮೇಯರ್ ಮರಿಯನ್ ಬ್ಯಾರಿ (78) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಐದು ವರ್ಷಗಳ ಹಿಂದೆ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ಅವರು, ಮೂತ್ರಕೋಶ ಗ್ರಂಥಿಯ ಕ್ಯಾನ್ಸರ್ ಮತ್ತು ಮಧುಮೇಹದಿಂದಲೂ ಬಳಲುತ್ತಿದ್ದರು. ಎರಡು ದಿನ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.