ADVERTISEMENT

ಶ್ವೇತಭವನಕ್ಕೆ ಬಾಂಬ್‌ ಬೆದರಿಕೆ

ಆತಂಕ ಸೃಷ್ಟಿಸಿದ ವ್ಯಕ್ತಿಯ ಬಂಧನ

ಐಎಎನ್ಎಸ್
Published 19 ಮಾರ್ಚ್ 2017, 19:30 IST
Last Updated 19 ಮಾರ್ಚ್ 2017, 19:30 IST
ಶ್ವೇತಭವನಕ್ಕೆ ಬಾಂಬ್‌ ಬೆದರಿಕೆ
ಶ್ವೇತಭವನಕ್ಕೆ ಬಾಂಬ್‌ ಬೆದರಿಕೆ   
ವಾಷಿಂಗ್ಟನ್‌: ಶ್ವೇತಭವನಕ್ಕೆ ಬಾಂಬ್‌  ಬೆದರಿಕೆ ಒಡ್ಡಿದ್ದ ವ್ಯಕ್ತಿಯೊಬ್ಬನನ್ನು ಬೇಹುಗಾರಿಕಾ ಅಧಿಕಾರಿಗಳು ಶನಿವಾರ  ಬಂಧಿಸಿದ್ದಾರೆ. ತಪಾಸಣಾ ಕೇಂದ್ರದ ಬಳಿ ತಾನು ಚಾಲನೆಮಾಡಿಕೊಂಡು ಬಂದ ಕಾರಿನಲ್ಲಿ ಬಾಂಬ್‌ ಇದೆ ಎಂದು  ಹೆದರಿಸಿದ ವ್ಯಕ್ತಿಯನ್ನು  ವಶಕ್ಕೆ ಪಡೆಯಲಾಯಿತು.
 
ಬಾಂಬ್ ಬೆದರಿಕೆ ನಂತರ ಶ್ವೇತಭವನಕ್ಕೆ ಭದ್ರತೆ ಹೆಚ್ಚಿಸಲಾಯಿತು. ಕಾರಿನಲ್ಲಿ ಸ್ಫೋಟಕ ಇದೆ ಎಂಬುದರ ಬಗ್ಗೆಯೂ ತೀವ್ರ ತಪಾಸಣೆ ನಡೆಸಲಾಯಿತು. ಇದೊಂದು  ಅನುಮಾನಾಸ್ಪದ ಕಾರು ಎಂದು ಘೋಷಣೆ ಮಾಡಲಾಯಿತು. 
 
15 ನೇ ಸ್ಟ್ರೀಟ್‌ ಮತ್ತು ಇ ಸ್ಟ್ರೀಟ್‌ ಎನ್‌ಡಬ್ಲ್ಯೂ ನಡುವಿನ ತಪಾಸಣಾ ಕೇಂದ್ರದಲ್ಲಿ ಈ ವ್ಯಕ್ತಿ ಕಾರು ಚಾಲನೆ ಮಾಡಿಕೊಂಡು ಬಂದಿದ್ದ. ಈ ಘಟನೆ ನಡೆದ ವೇಳೆ ಅಧ್ಯಕ್ಷ ಟ್ರಂಪ್‌ ಅವರು ಫ್ಲಾರಿಡಾದಲ್ಲಿದ್ದರು. 
 
ಶನಿವಾರ ರಾತ್ರಿಯ ಘಟನೆ ನಡೆದ ನಂತರ ಭಾನುವಾರವೂ ಶ್ವೇತಭವನದ ಹಲವು ತಪಾಸಣಾ ಗೇಟ್‌ಗಳನ್ನು ಮುಚ್ಚಲಾಗಿತ್ತು.
 
ಈ ಹಿಂದಿನ ಘಟನೆಗಳು
– ಕಳೆದ ಶನಿವಾರ ಶ್ವೇತಭವನ ಎದುರು ದ್ವಿಚಕ್ರ ವಾಹನ ರ್‍್ಯಾಕ್‌ನಿಂದ ವ್ಯಕ್ತಿಯೊಬ್ಬ ನೆಗೆದು  ಆತಂಕ ಸೃಷ್ಟಿಸಿದ.  ಈತನ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿತ್ತು. 
– ಮಾರ್ಚ್‌ 10 ರಂದು ಮಧ್ಯರಾತ್ರಿ  ಅಡೆತಡೆಗಳನ್ನು ದಾಟಿ ಶ್ವೇತಭವನದ  ಹುಲ್ಲು ಹಾಸಿನ ಮೇಲೆ 15 ನಿಮಿಷ ವ್ಯಕ್ತಿಯೊಬ್ಬ ವಿಹರಿಸಿದ್ದ. ಈ ವೇಳೆ ಟ್ರಂಪ್‌ ಶ್ವೇತಭವನದ ಒಳಗೇ ಇದ್ದರು. 
– 2014ರಲ್ಲಿ ಬರಾಕ್‌ ಒಬಾಮ ಅಧ್ಯಕ್ಷರಾಗಿದ್ದ ವೇಳೆ ಸೇನೆಯ ಯೋಧನೊಬ್ಬ ತಾನು ಮಾನಸಿಕ ಅಸ್ವಸ್ಥ ಎಂದು ಹೇಳಿಕೊಂಡು ಜೇಬಿನಲ್ಲಿ ಚಾಕು ಇಟ್ಟುಕೊಂಡು ಶ್ವೇತಭವನದ ಒಳಗೆ ನುಗ್ಗಿದ್ದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.