ADVERTISEMENT

ಸಿಖ್ ಕ್ಯಾಬ್ ಚಾಲಕನ ಮೇಲೆ ಹಲ್ಲೆ

ಪಿಟಿಐ
Published 18 ಏಪ್ರಿಲ್ 2017, 17:42 IST
Last Updated 18 ಏಪ್ರಿಲ್ 2017, 17:42 IST

ನ್ಯೂಯಾರ್ಕ್ (ಪಿಟಿಐ): ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕರು ಸಿಖ್  ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿ, ಅವರ ಪೇಟವನ್ನು ಕೆಡವಿದ ಪ್ರಕರಣ ನ್ಯೂಯಾರ್ಕ್‌ನಲ್ಲಿ ವರದಿಯಾಗಿದೆ.

ದ್ವೇಷಕ್ಕಾಗಿ ಈ ಅಪರಾಧ ನಡೆದಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಲ್ಲೆಗೆ  ಒಳಗಾದ ಚಾಲಕನನ್ನು ಹರ್ಕಿರತ್ ಸಿಂಗ್ ಎಂದು ಗುರುತಿಸಲಾಗಿದ್ದು, ಅವರು ಮೂರು ವರ್ಷಗಳ ಹಿಂದೆ ಪಂಜಾಬ್‌ನಿಂದ ಇಲ್ಲಿಗೆ ಬಂದು ನೆಲೆಸಿದ್ದಾರೆ.

ADVERTISEMENT

‘ಭಾನುವಾರ ಸಂಜೆ ನಡೆದ ಈ ಘಟನೆಯಿಂದ ಭಯಗೊಂಡಿದ್ದೇನೆ. ನನ್ನ ಧರ್ಮ ಮತ್ತು ನಂಬಿಕೆಗೆ ಅವಮಾನವಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಘಟನೆಯ ವಿವರ: ಮೂವರು ಯುವಕರು ಮತ್ತು ಒಬ್ಬ ಯವತಿಯನ್ನು ಮೆಡಿಸನ್ ವೃತ್ತದಲ್ಲಿ ಹತ್ತಿಸಿಕೊಂಡು ಬ್ರೊನಕ್ಸ್‌ನಲ್ಲಿ ಬಿಟ್ಟಾಗ, ಪ್ರಯಾಣಿಕರು ತಪ್ಪು ವಿಳಾಸಕ್ಕೆ ಕರೆದುಕೊಂಡು ಬರಲಾಗಿದೆ ಎಂದು ದೂರಿದರು. ಅವರೆಲ್ಲ ಪಾನಮತ್ತರಾಗಿದ್ದರು. ಎಲ್ಲಿಗೆ ಹೋಗಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳಲಿಲ್ಲ. ನಂತರ ಈ ಪ್ರಯಾಣಿಕರು ನಿಂದಿಸಲು ಆರಂಭಿಸಿದರು. ಒಬ್ಬ ಪ್ರಯಾಣಿಕ ಟ್ಯಾಕ್ಸಿ ಮೀಟರ್‌ನ್ನು ಧ್ವಂಸ ಮಾಡಿ ತಮ್ಮ ಮೇಲೆ ಹಲ್ಲೆ ಮಾಡಿದ ಎಂದು ಸಿಂಗ್ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.