ADVERTISEMENT

ಸೆ.26ರಂದು ಮಾಟಿಸ್‌ ಭಾರತಕ್ಕೆ

ಪಿಟಿಐ
Published 23 ಸೆಪ್ಟೆಂಬರ್ 2017, 19:30 IST
Last Updated 23 ಸೆಪ್ಟೆಂಬರ್ 2017, 19:30 IST
ಜೇಮ್ಸ್ ಮಾಟಿಸ್
ಜೇಮ್ಸ್ ಮಾಟಿಸ್   

ನ್ಯೂಯಾರ್ಕ್‌: ಅಮೆರಿಕದ ರಕ್ಷಣಾ ಪ್ರಧಾನ ಕಾರ್ಯದರ್ಶಿ ಜೇಮ್ಸ್‌ ಮಾಟಿಸ್‌ ಅವರು ಇದೇ 26ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ.

‘ಎರಡು ದಿವಸಗಳ ಭೇಟಿ ವೇಳೆ ಮಾಟಿಸ್‌ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ‌ದಕ್ಷಿಣ ಏಷ್ಯಾದ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸುವರು’ ಎಂದು ಪೆಂಟಗಾನ್‌ ಹೇಳಿದೆ.

ಡೊನಾಲ್ಡ್‌ ಟ್ರಂಪ್‌ ಆಡಳಿತದಲ್ಲಿ ರಕ್ಷಣಾ ಪ್ರಧಾನ ಕಾರ್ಯದರ್ಶಿಯ ಮೊದಲ ಸಂಪುಟ ಮಟ್ಟದ ಅಧಿಕೃತ ಭೇಟಿ ಇದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.