ADVERTISEMENT

ಸೇನೆಯ ಪರಮಾಧಿಕಾರ ಅಧ್ಯಕ್ಷರಿಗೆ: ಎರ್ಡೊಗನ್‌

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 19:30 IST
Last Updated 29 ಜುಲೈ 2016, 19:30 IST

ಅಂಕಾರ/ ಇಸ್ತಾಂಬುಲ್‌ (ರಾಯಿಟರ್ಸ್‌):  ಸಶಸ್ತ್ರ ಪಡೆಗಳು ಮತ್ತು ರಾಷ್ಟ್ರೀಯ ಗುಪ್ತಚರ ಸಂಸ್ಥೆಯ ನಿಯಂತ್ರಣ ಅಧ್ಯಕ್ಷರ ಕೈಲಿರಬೇಕು ಎಂದು ಟರ್ಕಿಯ ಅಧ್ಯಕ್ಷ ರಿಸೆಪ್‌ ತಯ್ಯಪ್‌ ಎರ್ಡೊಗನ್ ಅವರು ಪ್ರತಿಪಾದಿಸಿರುವುದಾಗಿ ಅರೆಸೇನಾ  ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ತಿಂಗಳ 15 ಮತ್ತು16ರಂದು ನಡೆದ ಸೇನಾ ದಂಗೆಯಲ್ಲಿ ಪಾಲ್ಗೊಂಡಿದ್ದರೆಂಬ ಆರೋಪದಲ್ಲಿ ಸುಮಾರು 1700 ಸೇನಾ ಸಿಬ್ಬಂದಿಯನ್ನು ವಜಾಗೊಳಿಸಿದ ಬಳಿಕ ಪ್ರಧಾನಿ ಬಿನಾಲಿ ಯಿಲ್ದಿರಿಮ್‌ ನೇತೃತ್ವದಲ್ಲಿ ನಡೆದ ಟರ್ಕಿಯ ಸುಪ್ರೀಂ ಸೇನಾ ಮಂಡಳಿಯ (ವೈಎಎಸ್‌) ಸಭೆಯಲ್ಲಿ ಎರ್ಡೊಗನ್  ಅವರು ಈ ವಿಷಯ ಪ್ರಸ್ತಾಪಿಸಿದರು.

ಸಶಸ್ತ್ರ ಪಡೆಗಳ ಮುಖ್ಯಸ್ಥ ಹುಲುಸಿ ಅಕರ್ ಅವರಿಗೆ ಮುಖ್ಯಸ್ಥ ಹುದ್ದೆ ಮತ್ತು ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆ ಕಮಾಂಡರ್‌ ನೇಮಕ ಹಾಗೂ ಉನ್ನತ ಅಧಿಕಾರಿಗಳ ಸ್ಥಾನದಲ್ಲಿ ಕೆಲ ಬದಲಾವಣೆ ಕುರಿತ ಮಂಡಳಿಯ ನಿರ್ಣಯವನ್ನು ಅಧ್ಯಕ್ಷ ಎರ್ಡೊಗನ್ ಅನುಮೋದಿಸಿದರು ಎಂದು ವಕ್ತಾರ ಇಬ್ರಾಹಿಂ ಕಲೀನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.