ADVERTISEMENT

ಸ್ವಿಸ್‌: 2017ಕ್ಕೆ ತೆರಿಗೆ ಮಾಹಿತಿ ವಿನಿಮಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 20:06 IST
Last Updated 3 ಸೆಪ್ಟೆಂಬರ್ 2015, 20:06 IST

ಜಿನೀವಾ (ಪಿಟಿಐ): ಸ್ವಯಂಚಾಲಿತ ತೆರಿಗೆ ಮಾಹಿತಿ ವಿನಿಮಯ ವ್ಯವಸ್ಥೆ ಜಾರಿಗೆ ಸ್ವಿಟ್ಜರ್ಲೆಂಡ್‌ನ ಬ್ಯಾಂಕುಗಳು ಕೆಲಸ ಮಾಡುತ್ತಿವೆ. ಇದು ಸ್ವಿಟ್ಜರ್‌ಲೆಂಡ್‌ ಬ್ಯಾಂಕುಗಳಲ್ಲಿ ಅಕ್ರಮವಾಗಿ ಸಂಪತ್ತು ಕೂಡಿಟ್ಟವರ ವಿರುದ್ಧ ಕ್ರಮ ಕೈಗೊಳ್ಳುವ ಭಾರತದ ಪ್ರಯತ್ನಕ್ಕೆ ನೆರವಾಗಲಿದೆ.

ಬ್ಯಾಂಕಿಂಗ್‌ ರಹಸ್ಯಗಳನ್ನು ಕಾಪಾಡಿಕೊಳ್ಳುವುದಕ್ಕೆ ಹೆಸರಾಗಿರುವ ಸ್ವಿಟ್ಜರ್ಲೆಂಡ್ ಮೇಲೆ ಮಾಹಿತಿ ಬಹಿರಂಗ ಮಾಡುವಂತೆ ಭಾರತ ಒತ್ತಡ ಹೇರಿತ್ತು. ಇತ್ತೀಚೆಗೆ ಎಚ್‌ಎಸ್‌ಬಿಸಿ ಬ್ಯಾಂಕ್‌ನ ಮಾಜಿ ನೌಕರರೊಬ್ಬರು ಅಕ್ರಮ ಠೇವಣಿ ಇರಿಸಿದ್ದ ಖಾತೆದಾರರ ಮಾಹಿತಿ ಕದ್ದು ಬಹಿರಂಗಪಡಿಸಿದ್ದರು. ಅದರಲ್ಲಿ ನೂರಾರು ಭಾರತೀಯರ ಹೆಸರೂ ಇತ್ತು. ಈ ಬಗ್ಗೆ ಭಾರತದಲ್ಲಿ ತನಿಖೆಯೂ ಆರಂಭವಾಗಿದೆ.

ಅಕ್ರಮ ಹಣಕಾಸು ವ್ಯವಹಾರವನ್ನು ತಡೆಯುವ ನಿಟ್ಟಿನಲ್ಲಿ ಜಾಗತಿಕ ಒತ್ತಡಕ್ಕೆ ಮಣಿದಿರುವ ಸ್ವಿಟ್ಜರ್‌ಲೆಂಡ್‌, ಈಗ ಸ್ವಯಂಚಾಲಿತ ತೆರಿಗೆ ಮಾಹಿತಿ ವಿನಿಮಯ ವ್ಯವಸ್ಥೆ ಜಾರಿಗೆ ಒಪ್ಪಿಗೆ ನೀಡಿದೆ. 2017ರ ಹೊತ್ತಿಗೆ ಇದು ಜಾರಿಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.