ADVERTISEMENT

ಹಡುಗು ದುರಂತ: 700 ಮಂದಿ ಜಲಸಮಾಧಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 16:20 IST
Last Updated 19 ಏಪ್ರಿಲ್ 2015, 16:20 IST
ಮೆಡಿಟರೇನಿಯನ್ ಸಮುದ್ರದಲ್ಲಿ ದುರಂತಕ್ಕೀಡಾದ ಹಡುಗಿನಲ್ಲಿ ಕಿಕ್ಕಿರಿದು ತುಂಬಿದ್ದ ಪ್ರವಾಸಿಗರು. -ರಾಯಿಟರ್ಸ್ ಚಿತ್ರ
ಮೆಡಿಟರೇನಿಯನ್ ಸಮುದ್ರದಲ್ಲಿ ದುರಂತಕ್ಕೀಡಾದ ಹಡುಗಿನಲ್ಲಿ ಕಿಕ್ಕಿರಿದು ತುಂಬಿದ್ದ ಪ್ರವಾಸಿಗರು. -ರಾಯಿಟರ್ಸ್ ಚಿತ್ರ   

ರೋಮ್(ಎಎಫ್‌ಪಿ): ಮೆಡಿಟರೇನಿಯನ್ ಸಮುದ್ರದಲ್ಲಿ ಹಡುಗು ದುರಂತ ಸಂಭವಿಸಿ 700 ಮಂದಿ ಪ್ರವಾಸಿಗರು ಜಲಸಮಾಧಿಯಾಗಿರುವ ಘಟನೆ ಯುರೋಪ್‌ನ ಮಾಲ್ಟಾ ದ್ವೀಪದ ಬಳಿ ನಡೆದಿದೆ.

700 ಮಂದಿ ಪ್ರವಾಸಿಗರಿದ್ದ ಹಡುಗು ಯುರೋಪ್‌ ತಲುಪುವ ವೇಳೆ ಮಾಲ್ಟಾ ದ್ವೀಪದ ಬಳಿ ಮಗುಚಿ ಬೀಳುವುದನ್ನು ಅನತಿ ದೂರದಲ್ಲಿ ಹಡುಗೊಂದರಲ್ಲಿದ್ದ ಮೀನುಗಾರರಿಗೆ ಕಂಡಿದ್ದಾಗಿ ಯುಎನ್‌ಹೆಚ್‌ಸಿಆರ್‌ ಭಾನುವಾರ ತಿಳಿಸಿದೆ.

ಹಡುಗಿನಲ್ಲಿ 700ಕ್ಕಿಂತ ಹೆಚ್ಚನ ಪ್ರವಾಸಿಗರಿದ್ದರು. ಅವರಲ್ಲಿ  28 ಮಂದಿ ಪ್ರವಾಸಿರು ಅದೃಷ್ಟವಶಾತ್‌ ಪಾರಾಗಿದ್ದಾರೆ ಎಂದು ಯುಎನ್‌ಹೆಚ್‌ಸಿಆರ್‌ ವಕ್ತಾರೆ ಕರ್ಲೊಟ್ಟ ಸಮಿ 'ಸ್ಕೈಟಿಜಿ24' ಖಾಸಗಿ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.