ADVERTISEMENT

ಹಬಲ್‌ಗಿಂತಲೂ 100 ಪಟ್ಟು ಪ್ರಬಲ ದೂರದರ್ಶಕ ನಿರ್ಮಿಸಿದ ನಾಸಾ

ಪಿಟಿಐ
Published 3 ನವೆಂಬರ್ 2016, 10:28 IST
Last Updated 3 ನವೆಂಬರ್ 2016, 10:28 IST
ಹಬಲ್‌ಗಿಂತಲೂ 100 ಪಟ್ಟು ಪ್ರಬಲ ದೂರದರ್ಶಕ ನಿರ್ಮಿಸಿದ ನಾಸಾ
ಹಬಲ್‌ಗಿಂತಲೂ 100 ಪಟ್ಟು ಪ್ರಬಲ ದೂರದರ್ಶಕ ನಿರ್ಮಿಸಿದ ನಾಸಾ   

‌ವಾಷಿಂಗ್ಟನ್: ಬಾಹ್ಯಾಕಾಶದಲ್ಲಿ ಶೋಧನ ಕಾರ್ಯಗಳಿಗೆ ಬಳಕೆಯಾಗುತ್ತಿರುವ ಹಬಲ್‌ ದೂರದರ್ಶಕಕ್ಕಿಂತ 100 ಪಟ್ಟು ಪ್ರಬಲವಾದ ದೂರದರ್ಶಕವನ್ನು ನಾಸಾ ಸಿದ್ಧಪಡಿಸಿದೆ.

26 ವರ್ಷಗಳಷ್ಟು ಹಳೆಯದಾದ ನಾಸಾದ ಹಬಲ್‌ ಬಾಹ್ಯಾಕಾಶ ದೂರದರ್ಶಕಕ್ಕಿಂತ ‘ಜೇಮ್ಸ್‌ ವೆಬ್‌’ ಹೆಚ್ಚು ಸಮರ್ಥವಾಗಿದ್ದು, ಜಗತ್ತಿನ ಸೃಷ್ಟಿಯಲ್ಲಿನ ಮೊದಲ ಗ್ಯಾಲಕ್ಸಿಗಳನ್ನು ಪತ್ತೆ ಮಾಡಲು ಅನುವಾಗಲಿದೆ.

ಜೇಮ್ಸ್‌ ವೆಬ್‌ ದೂರದರ್ಶಕದ ಇನ್ಫ್ರಾರೆಡ್‌ ಕ್ಯಾಮೆರಾಗಳು ಅತಿ ಸೂಕ್ಷ್ಮವಾಗಿದ್ದು, ಸೂರ್ಯ ಕಿರಣಗಳಿಂದ ಅವುಗಳನ್ನು ಮರೆಯಾಗಿಡಬೇಕು. ಟೆನ್ನಿಸ್‌ ಕೋರ್ಟ್‌ ಅಳತೆಯ 5 ಪದರಗಳ ಸೂರ್ಯ ರಕ್ಷಾಕವಚ ಶಾಖವನ್ನು ದೂರದರ್ಶಕದ ಸಂವೇದಕಗಳಿಗೆ ತಲುಪದಂತೆ ತಡೆಯುತ್ತದೆ.

ADVERTISEMENT

ಸೂರ್ಯ ರಕ್ಷಾಕವಚವು ಮನುಷ್ಯರ ಕೂದಲಿನಷ್ಟು ತೆಳುವಾಗಿದೆ. ಐದೂ ಪದರಗಳು ಶೋಧಕದ ಉಷ್ಣ ಮತ್ತು ಶೀತ ಭಾಗಗಳಲ್ಲಿ ಉಷ್ಣತೆ ಸರಿದೂಗಿಸುವ ಕಾರ್ಯನಿರ್ವಹಿಸುತ್ತವೆ. ಪದರಗಳು ಕೆಪ್ಟಾನ್‌ನಿಂದ ಮಾಡಲ್ಪಟ್ಟಿದ್ದು, 298 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣತೆಯನ್ನು ತಡೆಯಬಲ್ಲದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.