ವಾಷಿಂಗ್ಟನ್(ಪಿಟಿಐ): ಒಸಾಮ ಬಿನ್ ಲಾಡೆನ್ ಸೇರಿದಂತೆ ಅಲ್ ಖೈದಾ ಸಂಘಟನೆಯ ಪ್ರಮುಖ ನಾಯಕರನ್ನು ನಾಶ-ಗೊಳಿಸಿ ಅದರ ಸಂಪರ್ಕ ಜಾಲವನ್ನು ದುರ್ಬಲಗೊಳಿಸಿದ್ದಕ್ಕಾಗಿ ಬರಾಕ್ ಒಬಾಮ ಅಮೆರಿಕ ಸೇನಾಪಡೆಯನ್ನು ಪ್ರಶಂಸಿಸಿದ್ದಾರೆ. ಆದರೆ ‘ಆಫ್ಘಾನಿಸ್ತಾನ ಇಂದಿಗೂ ತುಂಬ ಅಪಾಯಕಾರಿ ಸ್ಥಳವಾಗಿಯೇ ಉಳಿದಿದೆ’ ಎಂದೂ ಅವರು ಹೇಳಿದ್ದಾರೆ.
ಭಾನುವಾರ ರಾತ್ರಿ ಆಫ್ಘಾನಿಸ್ತಾನದ ಬಗ್ರಾಂ ವಾಯುನೆಲೆಗೆ ನಾಲ್ಕು ಗಂಟೆಗಳ ಹಠಾತ್ ಭೇಟಿ ನೀಡಿದ ಒಬಾಮ ಬಂಡುಕೋರರು ಹೇಡಿಗಳಂತೆ ಅಮಾಯಕ ನಾಗರಿಕರ ಮೇಲೆ ದಾಳಿ ನಡೆಸುತ್ತಲೇ ಇದ್ದಾರೆ.
ಆದರೆ ಆಫ್ಘಾನಿಸ್ತಾನ ಸಮುದಾಯದವರ ಸುಧಾರಣೆ ಸಾಧ್ಯವಾಗುವಂತೆ ನೀವು ಶ್ರಮಿಸಿದ್ದೀರಿ. ಹೆಚ್ಚು ಬಾಲಕಿಯರು ಶಾಲೆಗಳಿಗೆ ಮರಳುತ್ತಿದ್ದಾರೆ. ಸಾರ್ವಜನಿಕ ಆರೋಗ್ಯ, ಜೀವನಮಟ್ಟ ಮತ್ತು ಸಾಕ್ಷರತೆಯಲ್ಲಿ ಗಣನೀಯ ಅಭಿವೃದ್ಧಿ ಸಾಧಿಸಿದೆ’ ಎಂದು ಅಮೆರಿಕದ ಯೋಧರನ್ನು ಉದ್ದೇಶಿಸಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.