ADVERTISEMENT

‘ಕಾಶ್ಮೀರ ಪಾಕ್‌ನ ಅವಿಭಾಜ್ಯ ಅಂಗ’

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 19:55 IST
Last Updated 3 ಜೂನ್ 2015, 19:55 IST
‘ಕಾಶ್ಮೀರ ಪಾಕ್‌ನ ಅವಿಭಾಜ್ಯ ಅಂಗ’
‘ಕಾಶ್ಮೀರ ಪಾಕ್‌ನ ಅವಿಭಾಜ್ಯ ಅಂಗ’   

ಇಸ್ಲಾಮಾಬಾದ್‌ (ಐಎಎನ್‌ಎಸ್‌):  ‘ಪಾಕಿಸ್ತಾನ ಮತ್ತು ಕಾಶ್ಮೀರವನ್ನು ಬೇರ್ಪಡಿಸಲು ಸಾಧ್ಯವಿಲ್ಲ’ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್‌ ರಹೀಲ್‌ ಷರೀಫ್‌ ಹೇಳಿದ್ದಾರೆ.

‘ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ನಿರ್ಣಯಗಳು ಮತ್ತು ಕಾಶ್ಮೀರದ ಜನರ  ಬಯಕೆಯಂತೆ ಬಗೆಹರಿಸಬೇಕು. ಹಾಗಾದಲ್ಲಿ ಈ ವಲಯದಲ್ಲಿ ಶಾಂತಿ ನೆಲೆಸಲು ಸಾಧ್ಯ’ ಎಂದು ಬುಧವಾರ ಇಲ್ಲಿನ ರಾಷ್ಟ್ರೀಯ ರಕ್ಷಣಾ ವಿ.ವಿಯಲ್ಲಿ ನಡೆದ ಸಮಾವೇಶದಲ್ಲಿ ಅವರು ತಿಳಿಸಿದರು.

‘ಶತ್ರುಗಳು ಭಯೋತ್ಪಾದನೆಗೆ ಪ್ರಚೋದನೆ ನೀಡುವ ಮೂಲಕ ಪಾಕಿಸ್ತಾನದ ಆಂತರಿಕ ಭದ್ರತೆಗೆ ಧಕ್ಕೆ ಉಂಟುಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿಯ ಕೆಟ್ಟ ಸಂಚುಗಳನ್ನು ಎದುರಿಸುವ ಶಕ್ತಿ ಪಾಕ್‌ಗೆ ಇದೆ’ ಎಂದು ರಹೀಲ್‌ ಹೇಳಿರುವುದನ್ನು ‘ಡಾನ್‌’ ದಿನಪತ್ರಿಕೆ ವರದಿ ಮಾಡಿದೆ.

ಭಾರತದ ತೀಕ್ಷ್ಣ  ಪ್ರತಿಕ್ರಿಯೆ: ರಹೀಲ್‌  ಷರೀಫ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ. ಕೆ. ಸಿಂಗ್‌ ಅವರು, ‘ಪಾಕಿಸ್ತಾನವು ತಪ್ಪು ಭಾವನೆಗಳನ್ನು ಇಟ್ಟುಕೊಂಡಿರಲಿ. ಆದರೆ ವಾಸ್ತವ ಪರಿಸ್ಥಿತಿಗೆ ಅದು ಯಾವುದೇ ಪ್ರಭಾವ ಬೀರುವುದಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.