ADVERTISEMENT

2 ಟನ್‌ ತೂಕದ ಹೊಸ ಸನ್‌ಫಿಷ್‌ ಪ್ರಭೇದ ಪತ್ತೆ

ಏಜೆನ್ಸೀಸ್
Published 24 ಜುಲೈ 2017, 11:54 IST
Last Updated 24 ಜುಲೈ 2017, 11:54 IST
2 ಟನ್‌ ತೂಕದ ಹೊಸ ಸನ್‌ಫಿಷ್‌ ಪ್ರಭೇದ ಪತ್ತೆ
2 ಟನ್‌ ತೂಕದ ಹೊಸ ಸನ್‌ಫಿಷ್‌ ಪ್ರಭೇದ ಪತ್ತೆ   

ನಿರಂತರ ಶೋಧದಲ್ಲಿ 130 ವರ್ಷಗಳ ನಂತರ ಸಮುದ್ರ ತಳದಲ್ಲಿನ ಸನ್‌ಫಿಷ್‌ನ ಹೊಸ ಪ್ರಭೇದ ನ್ಯೂಜಿಲೆಂಡ್‌ನಲ್ಲಿ ಪತ್ತೆಯಾಗಿದೆ.

ಎಲುಬಿರುವ ಮೀನುಗಳ ಜಾತಿಯಲ್ಲಿ ಸನ್‌ಫಿಷ್‌ ಜಗತ್ತಿನ ದೊಡ್ಡ ಮೀನು. 2 ಟನ್‌(2000 ಕೆ.ಜಿ.)ಗೂ ಹೆಚ್ಚು ತೂಕವಿರುವ ಹೊಸ ಪ್ರಭೇದದ ಸನ್‌ಫಿಷ್‌ಗೆ ‘ಹುಡ್‌ವಿಂಕರ್‌’(ಅಥವಾ ಮೊಲಾ ಟೆಕ್ಟಾ) ಎಂದು ಹೆಸರಿಸಲಾಗಿದೆ.

ಅವಿತುಕೊಳ್ಳುವ ಗುಣದಿಂದಾಗಿ ಈ ಮೀನಿನ ಪ್ರಭೇದಗಳು ಈವರೆಗೂ ಪತ್ತೆಯಾಗಿರಲಿಲ್ಲ. ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಂ ಸೇರಿದಂತೆ ಬೇರೆಲ್ಲೂ ಸನ್‌ಫಿಷ್‌ ಸಂರಕ್ಷಿಸಿ ಅಧ್ಯಯನ ನಡೆಸುವುದು ಸಾಧ್ಯವಾಗಿಲ್ಲ. ಇದೇ ಕಾರಣದಿಂದ 30 ವರ್ಷಗಳಿಂದ ಈ ಮೀನಿನ ಕುರಿತ ಹೊಸ ಅಧ್ಯಯನ ನಡೆದಿರಲಿಲ್ಲ.

ADVERTISEMENT

ಮೂರು ಮೀಟರ್‌ ಉದ್ದದವರೆಗೂ ಬೆಳೆಯುವ ಈ ಮೀನುಗಳು 2 ಟನ್‌ಗೂ ಅಧಿಕ ತೂಕ ಹೊಂದುತ್ತವೆ. ಇದೀಗ ಪತ್ತೆಯಾಗಿರುವ ಹುಡ್‌ವಿಂಕರ್‌ ಕೂಡ ದೈತ್ಯಗಾತ್ರದ್ದೇ ಆಗಿದೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಮೀನುಗಾರಿಕಾ ಪ್ರದೇಶಗಳಿಂದ ಮಾದರಿ ಸಂಗ್ರಹಿಸಿ ಮರ್ಡೊಕ್‌ ವಿಶ್ವವಿದ್ಯಾಲಯದ ಸಂಶೋಧಕರು ದೈತ್ಯ ಸನ್‌ಫಿಷ್‌ಗಳ ನಡುವಿನ ವ್ಯತ್ಯಾಸವನ್ನು ಕಂಡು ಕೊಂಡಿದ್ದಾರೆ. ಆಸ್ಟ್ರೇಲಿಯಾದ ಸಂಶೋಧಕರು ಸಾವಿರಾರು ಮೈಲು ದೂರ ಕ್ರಮಿಸಿ, ತೀರಗಳಲ್ಲಿ 150ಕ್ಕೂ ಪ್ರಭೇದಗಳ ಪರೀಕ್ಷೆ ನಡೆಸಿ, ಮೂರು ವರ್ಷಗಳ ಅಧ್ಯಯನ ನಂತರ ಹುಡ್‌ವಿಂಕರ್‌ ಪತ್ತೆಯನ್ನು ಬಹಿರಂಗ ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.