ADVERTISEMENT

3–ಡಿ ತಂತ್ರಜ್ಞಾನದಿಂದ ತಾಮ್ರಯುಗದ ರೈತನ ಮುಖ ಮರುಸೃಷ್ಟಿ!

ಪಿಟಿಐ
Published 17 ಜುಲೈ 2017, 19:30 IST
Last Updated 17 ಜುಲೈ 2017, 19:30 IST

ಲಂಡನ್: ತಾಮ್ರಯುಗದಲ್ಲಿನ ರೈತರನೊಬ್ಬನ ಮುಖವನ್ನು 3–ಡಿ ತಂತ್ರಜ್ಞಾನ ಬಳಸಿ ವಿಜ್ಞಾನಿಗಳು ಮರುಸೃಷ್ಟಿಸಿದ್ದಾರೆ.

1930ರಲ್ಲಿ ಇಂಗ್ಲೆಂಡ್‌ನಲ್ಲಿ ದೊರೆತಿದ್ದ 4000 ವರ್ಷ ಹಳೆಯ ತಲೆಬುರುಡೆಯನ್ನು ಬಕ್ಸ್‌ಟನ್ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿತ್ತು.

ಕಲ್ಲಿನ ಪೆಟ್ಟಿಗೆಯಲ್ಲಿಟ್ಟು ಈತನನ್ನು ಹೂಳಲಾಗಿತ್ತು. ಕಲ್ಲಿನ ಪೆಟ್ಟಿಗೆ ಒಡೆದು ಇದರಲ್ಲಿದ್ದ ತಲೆಬುರುಡೆಯ ಮುಂಭಾಗ ಹಾನಿಗೊಂಡಿತ್ತು. ಆದರೆ ಬುರುಡೆಯ ಉಳಿದ ಭಾಗಗಳ ಸಹಾಯದಿಂದ ಮುಂಭಾಗ ಹೇಗಿರಬಹುದು ಎಂದು ಊಹಿಸಿ ಈ ಪ್ರತಿಕೃತಿ ರಚಿಸಲಾಗಿದೆ.

ADVERTISEMENT

ಲಿವರ್‌ಪೂಲ್ ಜಾನ್ ಮೂರ್ಸ್ ವಿಶ್ವವಿದ್ಯಾಲಯ ಈ  ಯತ್ನ ಮಾಡಿದೆ. ಈ ಮೊದಲು ಮಣ್ಣಿನ ಆಕೃತಿಗೆ 3–ಡಿ ತಂತ್ರಜ್ಞಾನ ಬಳಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.