ADVERTISEMENT

45 ಅಡಿ ಎತ್ತರದಿಂದ ಬಿದ್ದ ಬಾಲಕ ಸಾವು

ಪಿಟಿಐ
Published 19 ಆಗಸ್ಟ್ 2017, 19:30 IST
Last Updated 19 ಆಗಸ್ಟ್ 2017, 19:30 IST

ನ್ಯೂಯಾರ್ಕ್‌: ನ್ಯೂಜೆರ್ಸಿಯಲ್ಲಿರುವ ಸ್ವಾಮಿ ನಾರಾಯಣ ಮಂದಿರದ ಆವರಣದಲ್ಲಿ ಕಾಮಗಾರಿ ನಡೆಯುತ್ತಿದ್ದ ಸ್ಥಳದಿಂದ ಬಿದ್ದು ಬಾಲಕನೊಬ್ಬ ಮೃತಪಟ್ಟಿದ್ದಾನೆ.

ಪೆನ್ಸಿಲ್ವೇನಿಯಾದ ಹ್ಯಾಟ್‌ಫೀಲ್ಡ್‌ನ ಈ ಬಾಲಕ 16 ವರ್ಷವಿದ್ದಾನೆ. 45 ಅಡಿ ಎತ್ತರದಿಂದ ಬಿದ್ದಿದ್ದು, ಹ್ಯಾಮಿಲ್ಟನ್‌ನ ರಾಬರ್ಟ್‌ವುಡ್‌ ಜಾನ್ಸನ್‌ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತ ಅಲ್ಲಿ ಒಂದು ಗಂಟೆಯ ನಂತರ ಮೃತಪಟ್ಟಿದ್ದಾನೆ. ಬಾಲಕ ಯಾರು ಎಂಬುದನ್ನು ಪೊಲೀಸರು ಬಹಿರಂಗ ಮಾಡಿಲ್ಲ.

ಲ್ಯಾನ್ಸ್‌ಡೆಲ್‌ನಲ್ಲಿರುವ ದೇವಾಲಯಕ್ಕೆ ಬಾಲಕ ಮತ್ತು ಆತನ ಕುಟುಂಬದವರು ಪೂಜೆಗೆ ಬರುತ್ತಿದ್ದರು ಎಂದು ದೇವಸ್ಥಾನದಲ್ಲಿ ಸ್ವಯಂ ಸೇವಕನಾಗಿ ಕೆಲಸ ಮಾಡುತ್ತಿದ್ದ ವಿನಯ್‌ ಲಿಂಬಾಚಿಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT