ADVERTISEMENT

ಕೋಣೆಯ ಉಷ್ಣಾಂಶಕ್ಕೂ ರಕ್ತದೊತ್ತಡಕ್ಕೂ ಇದೆ ನಂಟು: ಅಧ್ಯಯನ

ಪಿಟಿಐ
Published 23 ಆಗಸ್ಟ್ 2018, 17:07 IST
Last Updated 23 ಆಗಸ್ಟ್ 2018, 17:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್: ಕೋಣೆಯ ಉಷ್ಣಾಂಶವನ್ನು ಹೆಚ್ಚಿಸುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ಕಡಿಮೆ ತಾಪಮಾನವು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.ವ್ಯಕ್ತಿಯ ರಕ್ತದೊತ್ತಡದ ಅಂಕಿ ಅಂಶಗಳನ್ನು ಕೋಣೆಯ ಉಷ್ಣಾಂಶದ ಜೊತೆ ಹೋಲಿಸಿದಾಗ ಈ ಅಂಶ ಕಂಡುಬಂದಿದೆ ಎಂದು ಯೂನಿವರ್ಸಿಟಿ ಕಾಲೇಜ್ ಲಂಡನ್‌ನ ಸ್ಟೀಫನ್ ಜಿವ್ರಾಜ್ ಹೇಳಿದ್ದಾರೆ.

ಆಹಾರ ಹಾಗೂ ಜೀವನಶೈಲಿ ಬದಲಾವಣೆ ಮೂಲಕವೂ ರಕ್ತದೊತ್ತಡವನ್ನು ತಹಬದಿಗೆ ತರಬಹುದು. ಜೊತೆಗೆ ಮನೆಯ ಉಷ್ಣಾಂಶವನ್ನು ಕೊಂಚ ಏರಿಸುವುದರಿಂದಲೂ ರಕ್ತದೊತ್ತಡ ನಿಯಂತ್ರಣ ಸಾಧ್ಯ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.