ADVERTISEMENT

ಕಾರ್ನರ್‌ ಸೈಟ್‌ ಕನವರಿಕೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2017, 19:30 IST
Last Updated 26 ಜನವರಿ 2017, 19:30 IST

ನಿವೇಶನ ಖರೀದಿಸುವವರಲ್ಲಿ ಎರಡು ವಿಧ. ಕೇವಲ ಹೂಡಿಕೆಯನ್ನು ಮನದಲ್ಲಿರಿಸಿಕೊಂಡು ನಿವೇಶನ ಖರೀದಿಸುವ ವರ್ಗ ಒಂದಾದರೆ, ಮನೆ ಕಟ್ಟಲೆಂದು ನಿವೇಶನ ಖರೀದಿಸುವ ವರ್ಗ ಮತ್ತೊಂದು.

ಈ ಎರಡೂ ವರ್ಗಗಳ ನಿವೇಶನ ಆಯ್ಕೆಯಲ್ಲೂ ವೈವಿಧ್ಯತೆ ಇದೆ. ಮನೆ ಕಟ್ಟಲೆಂದು ನಿವೇಶನ ಖರೀದಿಸುವವರು ಭದ್ರತೆ, ಸವಲತ್ತು, ಅನುಕೂಲತೆಗಳಿಗೆ ಆದ್ಯತೆ ನೀಡುತ್ತಾರೆ. ಹೂಡಿಕೆಗೆಂದು ನಿವೇಶನ ಖರೀದಿಸುವವರಿಗೆ ಬಂಡವಾಳ ಹೂಡಿದ ಹಣ ಎಷ್ಟು ಬೇಗ ಬೆಳೆಯಬಲ್ಲದು? ಒಂದು ವೇಳೆ ಕಟ್ಟಡ ಕಟ್ಟಿಸಿದರೆ ಎಷ್ಟು ಬಾಡಿಗೆ ಸಿಗಬಹುದು ಎಂಬ ಲೆಕ್ಕಾಚಾರ ಆಧರಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ.

ಕೆಲವರು ಇರುತ್ತಾರೆ. ಅವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಜಾಣರು. ಬೆಲೆ ತುಸು ಹೆಚ್ಚಾದರೂ ಪರವಾಗಿಲ್ಲ ಎಂದು ಮೂಲೆಯಲ್ಲಿ ಡಬಲ್ ಸೈಟ್ ತೆಗೆದುಕೊಳ್ಳಲು ಇಷ್ಟಪಡುತ್ತಾರೆ.

ಕೈಲಿ ಹಣವಿದೆ ಎಂದೋ, ಸುಲಭಕ್ಕೆ ಸಾಲ ಸಿಗುತ್ತೆ ಎಂದೋ ಸಿಕ್ಕಿದ ನಿವೇಶನ ಖರೀದಿಸಲು ಆತುರಪಡುವುದಿಲ್ಲ. ಎರಡೂ ರಸ್ತೆಗೆ ಬಾಗಿಲಿಡುವ ಸಾಧ್ಯತೆ ವಾಣಿಜ್ಯ ದೃಷ್ಟಿಕೋನದಿಂದ ಸದಾ ಲಾಭದಾಯಕ ಎನ್ನುವುದು ಇಂಥವರ ಚಿಂತನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT