ADVERTISEMENT

ಸರಸ್ವತಿಯ ನೆಲೆ ‘ಸುಮನ’

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಸರಸ್ವತಿಯ ನೆಲೆ ‘ಸುಮನ’
ಸರಸ್ವತಿಯ ನೆಲೆ ‘ಸುಮನ’   

ನಮ್ಮನೆ ಹೆಸರು ಸುಮನ. ಮನೆ ಕಟ್ಟಿ ಮುಗಿಸಿದ ಮೇಲೆ ಮನೆಗೆ ಏನೆಂದು ಹೆಸರಿಡುವುದು ಎಂಬ ಚರ್ಚೆ ಆರಂಭವಾಯಿತು. ಒಳ್ಳೆಯ ಅರ್ಥವಿರುವ ಹೆಸರು ಇಡಬೇಕು ಎಂಬುದು ನಮ್ಮ ಬಯಕೆಯಾಗಿತ್ತು.

ನಾನು ಮತ್ತು ಪತಿ ಇಬ್ಬರೂ ಯೋಚಿಸಿ ಈ ಹೆಸರನ್ನು ಇರಿಸಿದ್ದೇವೆ. ಸುಮನ ಎಂದರೆ ಒಳ್ಳೆಯ ಮನಸ್ಸು ಎಂದು ಅರ್ಥ. ಜೊತೆಗೆ ಸರಸ್ವತಿಯ ಹೆಸರು ಇದು.

ನಾನು ಮತ್ತು ಪತಿ ಶಿಕ್ಷಕರು. ನಮ್ಮನೆಯಲ್ಲಿ ಯಾವಾಗಲೂ ಸರಸ್ವತಿ ನೆಲೆಸಿರಬೇಕು. ಮನೆಯ ಮಂದಿಗೆಲ್ಲ ಒಳ್ಳೆಯ ಮನಸ್ಸಿರಬೇಕು ಎಂಬುದು ಈ ಹೆಸರಿನ ಉದ್ದೇಶ. ‘ಸುಮನ’  ನೆಲೆಯಲ್ಲಿ ನಾವೆಲ್ಲ ಸಂತೋಷವಾಗಿ ಇದ್ದೇವೆ.

ADVERTISEMENT

–ಗೀತಾ ಶೇಷು, ಕೆಂಪೇಗೌಡ ಲೇಔಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.