ADVERTISEMENT

ಸೋಲಾರ್‌ ಬಳಕೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2016, 19:30 IST
Last Updated 8 ಡಿಸೆಂಬರ್ 2016, 19:30 IST
ಸೋಲಾರ್‌ ಬಳಕೆ
ಸೋಲಾರ್‌ ಬಳಕೆ   
ಕರ್ನಾಟಕದ ಮೊದಲ ಸೋಲಾರ್‌ ಪಾರ್ಕ್‌ ಎಂದು ಹೆಸರಾಗಿರುವ ಕ್ಲೀನ್‌ಮ್ಯಾಕ್ಸ್‌ ಬೆಂಗಳೂರಿನ ಪ್ರಮುಖ ಐಟಿ ಸಂಸ್ಥೆಗಳಿಗೆ ಸೌರಶಕ್ತಿಯನ್ನು ಪೂರೈಸುತ್ತಿದೆ. ತುಮಕೂರಿನಲ್ಲಿ ಕಾರ್ಯಾರಂಭ ಮಾಡಿರುವ ಈ ಸೋಲಾರ್‌ ಪಾರ್ಕ್‌ ಬೆಂಗಳೂರಿನಲ್ಲಿರುವ ಮೈಂಡ್‌ ಟ್ರೀ ಸಂಸ್ಥೆಗೆ ಸೌರ ಶಕ್ತಿ ಪೂರೈಸಲು ಆರಂಭಿಸಿದೆ. ಬೆಸ್ಕಾಂನ ಗ್ರಿಡ್‌ಗಳ ಮೂಲಕ ಸೌರ ಶಕ್ತಿಯನ್ನು ಒದಗಿಸಲಾಗುತ್ತಿದೆ. 
 
ಸೌರ ಶಕ್ತಿ ಪೂರೈಕೆಯ ಕಾರ್ಯಾರಂಭ ಆಗಸ್ಟ್‌ನಿಂದ ಶುರುವಾಗಿದ್ದು ಮೈಂಡ್‌ಟ್ರೀ ಸಂಸ್ಥೆಯ ಶೇ75ರಷ್ಟು ಇಂಧನದ ಅಗತ್ಯತೆಯನ್ನು ಪೂರೈಸುತ್ತಿದೆ. ಮೈಂಡ್‌ಟ್ರೀ ಸಂಸ್ಥೆಯ ಸೌರಶಕ್ತಿ ಬಳಕೆ ಪ್ರತಿ ವರ್ಷ ಸರಿಸುಮಾರು 2800 ಟನ್‌ನಷ್ಟು ಕಾರ್ಬನ್ ಫೂಟ್‌ಪ್ರಿಂಟ್‌ಗಳನ್ನು ಕಡಿಮೆ ಮಾಡಲಿದೆ.
ಕ್ಲೀನ್‌ಮ್ಯಾಕ್ಸ್‌ ಸೋಲಾರ್‌ ಫಾರ್ಮ್‌ ಅನ್ನು ಕರ್ನಾಟಕದ ಸೌರಶಕ್ತಿ ನಿಯಮಗಳ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.
 
**
ಬ್ರಿಗೇಡ್ ಗ್ರೂಪ್‌ಗೆ ₹925.5 ಕೋಟಿ ಆದಾಯ
2016-17ನೇ ಸಾಲಿನ ಮೊದಲ ಆರು ತಿಂಗಳಲ್ಲಿ ಬ್ರಿಗೇಡ್ ಎಂಟರ್‌ಪ್ರೈಸಸ್ ಲಿಮಿಟೆಡ್ ₹925.5 ಕೋಟಿ ಆದಾಯ ಗಳಿಸಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ₹914.6 ಕೋಟಿ ಆದಾಯ ಗಳಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಸಂಸ್ಥೆಯ ಆದಾಯ ₹52.3 ಕೋಟಿ ಹೆಚ್ಚಾದಂತೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.