ADVERTISEMENT

ಹೀಗಿರಲಿ ಮನೆ ಬಾಗಿಲು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2017, 19:30 IST
Last Updated 30 ಮಾರ್ಚ್ 2017, 19:30 IST
ಹೀಗಿರಲಿ ಮನೆ ಬಾಗಿಲು
ಹೀಗಿರಲಿ ಮನೆ ಬಾಗಿಲು   

ಮನೆಯ ಪ್ರಮುಖ ಅಂಗವಾಗಿ ಗುರುತಿಸಿಕೊಳ್ಳುವ ಕಿಟಕಿ ಹಾಗೂ ಬಾಗಿಲಿಗೆ ವಾಸ್ತುಪ್ರಕಾರ ಮಹತ್ವದ ಸ್ಥಾನವಿದೆ. ಮನೆಯ ಒಳಾಂಗಣ ವಿನ್ಯಾಸಕ್ಕೆ ನೀಡುವಷ್ಟೇ ಆದ್ಯತೆಯನ್ನು ಕಿಟಕಿ, ಬಾಗಿಲು ವಿನ್ಯಾಸ ಹಾಗೂ ಅವುಗಳನ್ನು ಜೋಡಿಸುವ ದಿಕ್ಕಿನ ಬಗ್ಗೆಯೂ ಹೆಚ್ಚಿನ ಮಹತ್ವ ನೀಡಬೇಕು.

*ಹೆಚ್ಚಾಗಿ ಮನೆ ಬಾಗಿಲು ಹಾಗೂ ಕಿಟಕಿ ಕಟ್ಟಡದ ಉತ್ತರ ಇಲ್ಲವೇ ಪೂರ್ವ ದಿಕ್ಕಿಗೆ ಇದ್ದರೆ ಒಳ್ಳೆಯದು.
*ಮನೆಯ ಮುಖ್ಯದ್ವಾರದ ಬಾಗಿಲೇ ಉಳಿದೆಲ್ಲ ಬಾಗಿಲುಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಅಂದದಲ್ಲೂ ಅದೇ ಪ್ರಧಾನವಾಗಿರಬೇಕು. ಕೆಲವು ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ಪ್ರವೇಶದ್ವಾರವಿರುತ್ತವೆ. ಎರಡು ಬಾಗಿಲು ಇದ್ದರೆ ಪರವಾಗಿಲ್ಲ. ಆದರೆ ಮೂರು ಅಥವಾ ಮೂರಕ್ಕಿಂತ ಹೆಚ್ಚಿನ ಬಾಗಿಲುಗಳಿದ್ದರೆ ಮನೆಯವರಿಗೆ ಸಮಸ್ಯೆ ಉಂಟಾಗುತ್ತದೆ ಎನ್ನಲಾಗುತ್ತದೆ.
*ಎಲ್ಲಾ ಕೋಣೆಗಳ ಬಾಗಿಲು ಒಂದೇ ಗಾತ್ರದಲ್ಲಿರುವಂತೆ ನೋಡಿಕೊಳ್ಳಿ. ಅಷ್ಟಕ್ಕೂ ಒಂದು ಕೋಣೆಯ ಬಾಗಿಲು ದೊಡ್ಡದಾಗಿರಬೇಕು ಎಂದರೆ ದಕ್ಷಿಣ ಹಾಗೂ ಪಶ್ಚಿಮ ದಿಕ್ಕಿನ ಬಾಗಿಲು ದೊಡ್ಡದಾಗಿದ್ದರೆ ಅಡ್ಡಿಯಿಲ್ಲ.
*ಬಾಗಿಲು ಹಾಗೂ ಕಿಟಕಿಗಳ ಸಂಖ್ಯೆ ಸಮಸಂಖ್ಯೆಯಲ್ಲಿರಬೇಕು. ಉದಾ– 2, 4, 6
*ಕಿಟಕಿ ಬಾಗಿಲು ಜೋಡಿಸುವಾಗ ಗಾಳಿ ಬೀಸುವ ದಿಕ್ಕಿನ ಬಗೆಗೂ ಗಮನವಿರಲಿ. ಕಿಟಕಿ ಹಾಗೂ ಬಾಗಿಲು ಎದುರುಬದರು ಇದ್ದಲ್ಲಿ ಮನೆಯೊಳಗೆ ಗಾಳಿ ಬೆಳಕು ಚೆನ್ನಾಗಿ ಬರುತ್ತವೆ.
*ಗೋಡೆಯ ಮಧ್ಯಭಾಗದಲ್ಲಿ ಬಾಗಿಲು ಇರುವುದು ಸೂಕ್ತವಲ್ಲ.
*ಕಿಟಕಿ ಹಾಗೂ ಬಾಗಿಲುಗಳಿಗೆ ಬಳಸುವ ಮರ ಒಂದೇ ಆಗಿದ್ದರೆ ಒಳಿತು.  ಸಾಗವಾನಿ (teak) ಮರ ಶ್ರೇಷ್ಠ.
*ಮುಖ್ಯದ್ವಾರಕ್ಕೆ ಅಡ್ಡಿಯಾಗುವಂತೆ ಮೆಟ್ಟಿಲು, ದೊಡ್ಡಮರ, ಹಳಿ ಮುಂತಾದವು ಇರುವುದು ಸರಿಯಲ್ಲ. ಎದುರಿಗೆ ದೇವಸ್ಥಾನ, ದೀಪದ ಕಂಬ ಇರುವುದು ಸರಿಯಲ್ಲ ಎನ್ನುತ್ತದೆ ವಾಸ್ತು.
*ಮಹಡಿ ಹೆಚ್ಚು ಇದ್ದರೆ ಬಾಗಿಲ ಮೇಲೆ ಬಾಗಿಲು ಬರುವಂತೆ ವಿನ್ಯಾಸ ಮಾಡಬಾರದು. ಹೀಗಿದ್ದರೆ ಬಡತನ, ಹಣಕಾಸಿನ ತೊಂದರೆ ಬರುತ್ತದೆ ಎಂದೂ ನಂಬುವವರಿದ್ದಾರೆ.
ಬಾಗಿಲ ಕುಸುರಿ
ಮುಖ್ಯದ್ವಾರದ ಬಾಗಿಲು ಹಾಗೂ  ಉಳಿದ ಬಾಗಿಲುಗಳ ಮೇಲೆ ಕುಸುರಿ ಕೆಲಸ ಮಾಡಿಸುವುದನ್ನು ವಾಸ್ತು ಅನುಮೋದಿಸುತ್ತದೆ. ಆದರೆ ಅದರಲ್ಲೂ ಕೆಲವು ನಿಯಮವಿದೆ.
* ಆನೆಯನ್ನೊಳಗೊಂಡಂತೆ ತಾವರೆ ಮೇಲೆ ಕುಳಿತಿರುವ ಲಕ್ಷ್ಮಿ ಚಿತ್ರ ಬಾಗಿಲ ಮೇಲೆ ಕೆತ್ತಿಸುವುದು ಶುಭ.
*ನಾಣ್ಯಗಳನ್ನು ನೀಡುತ್ತಿರುವ ದೇವರ ಚಿತ್ರ ಮೂಡಿಸಬಹುದು. ಹಾಗೂ ಕುಲದೇವತೆಯ ಚಿತ್ರವನ್ನು ಬಾಗಿಲ ಮೇಲೆ ಅಲಂಕರಿಸಬಹುದು.
*ಗಿಳಿ, ನವಿಲು, ಹಂಸ ಪಕ್ಷಿಗಳ ಚಿತ್ತಾರ ಹಾಗೂ ಪ್ರಕೃತಿ ಚಿತ್ರಬಳಸಲು ವಾಸ್ತು ಅವಕಾಶ ನೀಡಿದೆ. ಅಂದಹಾಗೆ ಬಾಗಿಲ ಹೊರಭಾಗದಲ್ಲಿ ದೇವತೆಗಳ ಚಿತ್ರ ಮೂಡಿಸುವುದು ಒಳಿತಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT