ADVERTISEMENT

ಗುರುವಾರ, 15–12–1966

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2016, 19:30 IST
Last Updated 14 ಡಿಸೆಂಬರ್ 2016, 19:30 IST

ಬಾವಿ ತೋಡಲು ಕೇಂದ್ರ ಸರ್ಕಾರದ
ಸಹಾಯಧನ

ನವದೆಹಲಿ, ಡಿ. 14–  ರಾಷ್ಟ್ರದಲ್ಲಿ ಹೊಸ ಬಾವಿಗಳ ತೋಡುವಿಕೆ ಹಾಗೂ ಇರುವ ಬಾವಿಗಳ ಆಳವನ್ನು ಹೆಚ್ಚಿಸುವುದಕ್ಕಾಗಿ ತಗಲುವ ಶೇ  25ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರವು ಸಹಾಯ ಧನವಾಗಿ ನೀಡುವುದು.

ಪಾರ್‍ಲಿಮೆಂಟ್‌ ಸದಸ್ಯ ಶ್ರೀ ಶ್ರೀರಾಮ ರೆಡ್ಡಿ ಅವರಿಗೆ ಕೇಂದ್ರ ಆಹಾರ ಸಚಿವ ಶಾಖೆ ಬರೆದಿರುವ ಪತ್ರವೊಂದರಲ್ಲಿ ಇದನ್ನು ತಿಳಿಸಲಾಗಿದೆ.

ಚೆಸ್ಟರ್‌ ಬೌಲ್ಸ್‌ ರಾಜಿನಾಮೆ ನೀಡರು
ನವದೆಹಲಿ, ಡಿ. 14– ತಾವು ರಾಜಿನಾಮೆ ನೀಡಲು ಆಲೋಚಿಸುತ್ತಿರುವುದಾಗಿ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಅಮೆರಿಕದ ರಾಯಭಾರಿ ಚೆಸ್ಟರ್‌ ಬೌಲ್ಸ್‌ರವರು ನಿರಾಕರಿಸಿದ್ದಾರೆ.
‘ರಾಜಿನಾಮೆ ನೀಡುವ ಇಚ್ಛೆ ನನಗಿಲ್ಲ. ನನ್ನ ಆರೋಗ್ಯ ಬಹಳ ಚೆನ್ನಾಗಿದೆ’ ಎಂದು, ಅವರು ಇಲ್ಲಿ ಇಂದು ಹೊರಡಿಸಿರುವ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಮೆನನ್‌ ಬೆಂಬಲಿಗರು ಅವರ ಪರವಾಗಿ
ವಾದಿಸಲಿಲ್ಲ: ಇಂದಿರಾ
ಅಹಮದಾಬಾದ್‌, ಡಿ.  1
4– ಕೇಂದ್ರ ಚುನಾವಣಾ ಸಮಿತಿಯಲ್ಲಿನ ಶ್ರೀ ಕೃಷ್ಣ ಮೆನನ್‌ರವರ ಬೆಂಬಲಿಗರು ಅವರ ಪರವಾಗಿ ವಾದಿಸದೇ ಹೋದುದರಿಂದಲೇ ಅವರು ಮುಂಬೈನಿಂದ ಸ್ಪರ್ಧಿಸಲು ಅವಕಾಶ ದೊರೆಯದಿದ್ದುದಕ್ಕೆ ಕಾರಣವೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.