ADVERTISEMENT

ಗುರುವಾರ, 9–11–1967

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 19:30 IST
Last Updated 8 ನವೆಂಬರ್ 2017, 19:30 IST

ಸುಗ್ಗಿಯವರೆಗೆ ರಾಜ್ಯಕ್ಕೆ ಆಂಧ್ರ ಅಕ್ಕಿ ನೀಡದು
ಬೆಂಗಳೂರು, ನ. 8–
ಮುಂದಿನ ಸುಗ್ಗಿಯ (ಜನವರಿ ಸುಮಾರಿನ) ವರೆಗೆ ‘ನಮ್ಮಿಂದ ಆಹಾರಧಾನ್ಯ ನಿರೀಕ್ಷಿಸಬೇಡಿ’ ಎಂದು ಆಂಧ್ರಪ್ರದೇಶ ಮೈಸೂರು ಸರ್ಕಾರಕ್ಕೆ ತಿಳಿಸಿದೆ.

ಮುಂದಿನ ನಾಲ್ಕು ತಿಂಗಳುಗಳ ಕಾಲ ಕೇರಳ ಮತ್ತು ಮದ್ರಾಸು ರಾಜ್ಯಗಳಿಗೆ ವಾಗ್ದಾನದಂತೆ ಅಕ್ಕಿ ಪೂರೈಸಬೇಕಾಗಿರುವುದರಿಂದ, ಹೊಸತಾಗಿ ಮೈಸೂರಿಗೆ ಅಕ್ಕಿ ಕಳುಹಿಸುವ ಸಾಮರ್ಥ್ಯ ಸದ್ಯಕ್ಕೆ ತನಗಿಲ್ಲ ಎಂದು ಆಂಧ್ರ ಪ್ರದೇಶ ಸ್ಪಷ್ಟಪಡಿಸಿದೆಯಾಗಿ ತಿಳಿದುಬಂದಿದೆ.

ಸಮನ್ವಯ ಸಾಧನೆಗೆ ಸಾಹಿತಿಗಳ ವೇದಿಕೆ ಹಿರಿಯರ ಹರಕೆ
ಬೆಂಗಳೂರು, ನ. 8–
ವೈವಿಧ್ಯಮಯ ವಿಚಾರಧಾರೆಯ ಸಾಹಿತಿಗಳು. ಅವರಲ್ಲಿ ಪರಸ್ಪರ ವೈಷಮ್ಯದ ಬದಲು ವಿಚಾರ ವಿನಿಮಯದ ಸ್ನೇಹ ವಾತಾವರಣ ಕಲ್ಪಿಸಲು ವೇದಿಕೆ. ಈ ಆದರ್ಶ ಕಾರ್ಯಕ್ಕೆ ಹಿರಿಯ ಸಾಹಿತಿಗಳಾದ ಡಾ. ಡಿ.ವಿ.ಜಿ. ಮತ್ತು ಡಾ. ಮಾಸ್ತಿ ಅವರ ಆಶೀರ್ವಾದ.

ADVERTISEMENT

ಬೆಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸಭಾಂಗಣದಲ್ಲಿ ಇಂದು ಸಂಜೆ ಸುಂದರ ಸಮಾರಂಭ. ಬೆಂಗಳೂರು ಸಮನ್ವಯ ಸಮಿತಿಯ ಪ್ರಥಮ ತ್ರೈಮಾಸಿಕ ಸಂಚಿಕೆ ಬಿಡುಗಡೆ ಮಾಡಿದ ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಿಳಿಹಾಸ್ಯದಲ್ಲಿ ಆದರೆ ಅಷ್ಟೇ ಅರ್ಥಗರ್ಭಿತವಾಗಿ ಸಮನ್ವಯದ ಅರ್ಥವಿವರಣೆ ಮೂಲಕ ಕಿರಿಯ ಸಾಹಿತಿಗಳನ್ನು ಎಚ್ಚರಿಸಿದರು.

ಕನ್ನಡದಲ್ಲಿ ಉತ್ತಮ ತಾಂತ್ರಿಕ ಗ್ರಂಥಗಳಿಗೆ ನಗದು ಬಹುಮಾನ
ಬೆಂಗಳೂರು, ನ. 8–
ವಿಜ್ಞಾನ ಮತ್ತು ತಾಂತ್ರಿಕ ವಿಷಯಗಳ ಅತ್ಯುತ್ತಮ ಕನ್ನಡ ಗ್ರಂಥಗಳಿಗೆ ನಗದು ಬಹುಮಾನ ಕೊಡುವ ಬಗ್ಗೆ ರಾಜ್ಯ ಸರಕಾರ ಆಲೋಚಿಸುತ್ತಿದೆ.

ವಿಜ್ಞಾನ ಮತ್ತು ತಾಂತ್ರಿಕ ವಿಷಯಗಳನ್ನು ಕುರಿತು ಉತ್ತಮ ಕನ್ನಡ ಗ್ರಂಥಗಳ ಪ್ರಕಟಣೆಗೆ ಪ್ರೋತ್ಸಾಹ ನೀಡಲು ಸರಕಾರ ವಿಚಾರ ಮಾಡುತ್ತಿರುವ ಯೋಜನೆಗಳಲ್ಲಿ ಇದೊಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.