ADVERTISEMENT

ಬುಧವಾರ, 12–4–1967

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 19:30 IST
Last Updated 11 ಏಪ್ರಿಲ್ 2017, 19:30 IST
ಹೊಗೇನಕಲ್‌ ಯೋಜನೆ: ಮೈಸೂರು–ಮದರಾಸ್‌ ಎಂಜಿನಿಯರುಗಳ ಚರ್ಚೆಗೆ ಸಮ್ಮತಿ
ಬೆಂಗಳೂರು, ಏ. 11– ನೀರಾವರಿ ಹಾಗೂ ವಿದ್ಯುತ್‌ ಯೋಜನೆಯಾದ ಹೊಗೇನಕಲ್‌ ಯೋಜನೆ ಬಗ್ಗೆ ಮದರಾಸ್‌ ಹಾಗೂ ಮೈಸೂರು ರಾಜ್ಯಗಳ ಮುಖ್ಯ ಎಂಜಿನಿಯರುಗಳು ಸೇರಿ ಮಾತುಕತೆ ನಡೆಸಲು ಮದರಾಸಿನ ಮುಖ್ಯಮಂತ್ರಿಯು ಒಪ್ಪಿದ್ದಾರೆ.
 
ಇಂದು ದೆಹಲಿಯಿಂದ ಹಿಂದಿರುಗಿದ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪ ಅವರು ಈ ವಿಷಯವನ್ನು ವರದಿಗಾರರಿಗೆ ತಿಳಿಸಿದರು.
 
ಜಸ್ಟಿಸ್‌ ವಾಂಛೂ: ಹೊಸ ಶ್ರೇಷ್ಠ ನ್ಯಾಯಾಧೀಶರು
ನವದೆಹಲಿ, ಏ. 11–  ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾದ ಜಸ್ಟಿಸ್‌ ಶ್ರೀ ಕೈಲಾಸ ನಾಥ್‌ ವಾಂಛೂ ಅವರನ್ನು ಭಾರತದ ಶ್ರೇಷ್ಠ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಿಸಲಾಗಿದೆ.
 
ರಾಷ್ಟ್ರಪತಿಯ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಇಂದು ರಾಜೀನಾಮೆಯಿತ್ತ ಕೆ. ಸುಬ್ಬರಾವ್‌ ಅವರ ಸ್ಥಾನದಲ್ಲಿ ಈ  ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.