ADVERTISEMENT

ಮಂಗಳವಾರ, 18–4–1967

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 19:30 IST
Last Updated 17 ಏಪ್ರಿಲ್ 2017, 19:30 IST

ಶಾಸಕರ– ಆಡಳಿತದ ಸಂಬಂಧ ಕುರಿತು ನಿಯಮಾವಳಿ ರಚನೆ
ನವದೆಹಲಿ, ಏ. 17–
ಪಾರ್ಲಿಮೆಂಟ್ ಹಾಗೂ ರಾಜ್ಯ ಶಾಸನಸಭೆಗಳ ಸದಸ್ಯರು ಮತ್ತು ಆಡಳಿತದ ನಡುವೆ ಇರಬೇಕಾದ ಸಂಬಂಧದ ಬಗೆಗೆ ಕೇಂದ್ರ ಗೃಹ ಸಚಿವ ಶಾಖೆ ಒಂದು ಕರಡು ನಿಯಮಾವಳಿಯನ್ನು ರಚಿಸಿದೆ.

ಮುಖ್ಯವಾಗಿ ಎರಡು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

1) ಸರ್ಕಾರಿ ನೌಕರರು ಶಾಸಕರ ಬಗೆಗೆ ಸೌಜನ್ಯದಿಂದ ನಡೆದುಕೊಳ್ಳಬೇಕು.

ADVERTISEMENT

2) ಶಾಸಕರು ಏನೇ ಹೇಳಿದರೂ ಅದನ್ನು ಪರಿಶೀಲಿಸಬೇಕು. ಆದರೆ ತಮಗೆ ಸರಿಯೆಂದು ಕಂಡುಬಂದಂತೆ ನಡೆಯಬೇಕು.

ಸಂವಿಧಾನದ ಪ್ರಕಾರ ಶಾಸಕರು ಕರ್ತವ್ಯ ನಿರ್ವಹಿಸುವುದಕ್ಕೆ ಪ್ರತಿಯೊಬ್ಬ ಅಧಿಕಾರಿಯೂ ನೆರವು ನೀಡಬೇಕು. ಶಾಸಕರ ಸಲಹೆಯನ್ನು ಈಡೇರಿಸಲು ಸಾಧ್ಯವಾಗದಿದ್ದರೆ ಶಾಸಕರಿಗೆ ಸೌಜನ್ಯದಿಂದ ಅದಕ್ಕೆ ಕಾರಣಗಳನ್ನು ವಿವರಿಸಬೇಕು.

***
ಗುಲಗಂಜಿಯ ಕಪ್ಪು
ಮುಂಬೈ, ಏ. 17– ‘
ರಾಷ್ಟ್ರದ ಅರ್ಥ ಪರಿಸ್ಥಿತಿ ಬಗ್ಗೆ ಎಲ್ಲ ಜನರಿಗೆ ನಿರಾಶೆ ಮತ್ತು ಚಿಂತೆ. ಆದರೆ ಖರ್ಚು ಮಾಡುವುದೊಂದೇ ಅವರಿಗೆ ಚಿಂತೆಯಿಲ್ಲದ ನಿರಾಳವಾದ ಕೆಲಸವೆಂದು ನನಗನಿಸುತ್ತದೆ’ ಎಂದು ಭಾರತದ ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ಇಂದು ಟೀಕಿಸಿದರು.

ಅವರು ಅಖಿಲ ಭಾರತ ಮಣ್ಣಿನ ಸಲಕರಣೆಗಳ ಉತ್ಪಾದಕರ ಸಂಘದ 19ನೇ ವಾರ್ಷಿಕ ಸಮ್ಮೇಳನವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಸಂಘದ ಅಧ್ಯಕ್ಷ ಶ್ರೀ ಜಿ.ಕೆ. ಭಗತ್ ಅವರು ತಮ್ಮ ಭಾಷಣದಲ್ಲಿ ಸರ್ಕಾರವು ತನ್ನ ವೆಚ್ಚವನ್ನು ಕಡಿಮೆ ಮಾಡುವುದರ ಮೂಲಕ ತೆರಿಗೆ ವಿನಾಯಿತಿಗಳನ್ನು ನೀಡಬಹುದೆಂದು ಸಲಹೆ ಮಾಡಿದ್ದರು.

***
ಪೋಲೀಸ್ ಮುಷ್ಕರ ಪರಿಸ್ಥಿತಿ: ಗಣನೀಯ ಸುಧಾರಣೆ
ನವದೆಹಲಿ, ಏ. 17–
ಇಂದು ಹೆಚ್ಚು ಜನ ಪೋಲೀಸ್ ನೌಕರರು ಕೆಲಸಕ್ಕೆ ಹಾಜರಾದ ಕಾರಣ ರಾಜಧಾನಿಯಲ್ಲಿ ನಡೆಯುತ್ತಿರುವ ಪೋಲೀಸರ ಮುಷ್ಕರದಿಂದ ಉಂಟಾಗಿದ್ದ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿದ್ದಿತು.

ಪೋಲೀಸ್ ಕೇಂದ್ರ ಕಚೇರಿಗಳಲ್ಲಿ ಹಾಜರಾತಿ ಶೇಕಡ 99 ರಷ್ಟಿದ್ದಿತೆಂದು ಪೋಲೀಸ್ ಇಲಾಖೆಯ ವಕ್ತಾರರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.