ADVERTISEMENT

ಮಂಗಳವಾರ, 4–4–1967

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2017, 19:30 IST
Last Updated 3 ಏಪ್ರಿಲ್ 2017, 19:30 IST

ಸದ್ಯದಲ್ಲಿ ಮಂತ್ರಿ ಮಂಡಲ ವಿಸ್ತರಣೆ ಇಲ್ಲ
ಬೆಂಗಳೂರು, ಏ. 3–
ರಾಜ್ಯದ ಮಂತ್ರಿಮಂಡಲದ ವಿಸ್ತರಣೆ ‘ಸದ್ಯದಲ್ಲಿ’ ಆಗುವುದಿಲ್ಲವೆಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.

ಅಗತ್ಯ ಕಂಡುಬಂದಾಗ ಮಂತ್ರಿ ಮಂಡಲವನ್ನು ವಿಸ್ತರಿಸುವುದು ಅಥವಾ ಸಚಿವರ ಸಂಖ್ಯೆಯನ್ನು ಕಡಿಮೆ ಮಾಡುವುದು ಮುಖ್ಯಮಂತ್ರಿಗಳಿಗೆ ಸಂಬಂಧಿಸಿದುದೆಂದು ಮುಖ್ಯಮಂತ್ರಿಗಳು ವರದಿಗಾರರಿಗೆ ತಿಳಿಸಿದರು.

ಮಂತ್ರಿಮಂಡಲದ ರಚನೆಯ ಬಗ್ಗೆ ‘ಇಬ್ಬರು ಅಥವಾ ಮೂರು ಮಂದಿ ಅಸಮಾಧಾನಗೊಂಡಂತೆ ಕಂಡು ಬರುವುದನ್ನು ಬಿಟ್ಟರೆ ಕಾಂಗ್ರೆಸ್ ಪಕ್ಷದಲ್ಲಿ ಈ ಬಗ್ಗೆ ಅಸಮಾಧಾನವಿರುವುದು’ ತಮಗೆ ತಿಳಿಯದೆಂದು ವರದಿಗಾರರ ಪ್ರಶ್ನೆಗಳಿಗೆ ಉತ್ತರವನ್ನಿತ್ತರು.

ಸಂಸತ್ ಕಾಂಗ್ರೆಸ್ ಪಕ್ಷದ ನಾಯಕ ಶ್ರೀ ಹನುಮಂತಯ್ಯ
ನವದೆಹಲಿ, ಏ. 3–
ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದ ಉಪನಾಯಕರಾಗಿ ಮೈಸೂರು ರಾಜ್ಯದ ಕೆ. ಹನುಮಂತಯ್ಯ ಅವರು ಇಂದು ಆಯ್ಕೆಗೊಂಡರು. ಈ ಅಧಿಕಾರಕ್ಕೆ ಅವರ ವಿರುದ್ಧ ಯಾರೂ ಸ್ಪರ್ಧಿಗಳೇ ಇಲ್ಲದಿದ್ದ ಕಾರಣ ಶ್ರೀ ಹನುಮಂತಯ್ಯ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಯು.ಪಿ.ಯಲ್ಲಿ ಕಾಂಗ್ರೆಸ್ ಆಡಳಿತ ಅಂತ್ಯ: ಮುಖ್ಯಮಂತ್ರಿಯಾಗಿ ಚರಣ್ ಸಿಂಗ್ ಅವರಿಂದ ಪ್ರಮಾಣ ವಚನ ಸ್ವೀಕಾರ
ಲಖನೌ, ಏ. 3–
ಶ್ರೀ ಚರಣ್ ಸಿಂಗ್ ಅವರು ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ, ಉತ್ತರ ಪ್ರದೇಶದಲ್ಲಿ ಅವಿಚ್ಛಿನ್ನವಾಗಿ 21 ವರ್ಷ ಕಾಲ ನಡೆದ ಕಾಂಗ್ರೆಸ್ ಆಡಳಿತ ಅಂತ್ಯಗೊಂಡಿತು.

ಸಂಯುಕ್ತ ವಿಧಾಯಕ ದಳದ ನಾಯಕ ಚರಣ್ ಸಿಂಗ್ ಅವರಿಗೆ ರಾಜ್ಯಪಾಲ ಶ್ರೀ ಬಿಶ್ವನಾಥದಾಸ್ ಅವರು ಪ್ರಮಾಣ ವಚನವನ್ನು ನೆರವೇರಿಸಿದರು. ಶ್ರೀ ಚರಣ್ ಸಿಂಗ್ ಅವರು ಬುಧವಾರದ ಹೊತ್ತಿಗೆ ಸಚಿವರ ಪಟ್ಟಿಯನ್ನು ರಾಜ್ಯಪಾಲರಿಗೆ ಒಪ್ಪಿಸುವ ನಿರೀಕ್ಷೆ ಇದೆ. ಹೊಸ ಸಚಿವರುಗಳು ಅದೇ ದಿನ ಪ್ರಮಾಣ ವಚನ ಸ್ವೀಕರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.