ADVERTISEMENT

ಸೋಮವಾರ 21–8–1967

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2017, 19:30 IST
Last Updated 20 ಆಗಸ್ಟ್ 2017, 19:30 IST

ಶಿವಸೇನೆಗೆ ಮಹಾರಾಷ್ಟ್ರ ಸರ್ಕಾರದ ಬೆಂಬಲ: ಕಮ್ಯುನಿಸ್ಟ್ ಖಂಡನೆ

ಮಧುರೆ, ಆ. 20– ಮಹಾರಾಷ್ಟ್ರ ಸರ್ಕಾರವು ತನ್ನ ರಾಜ್ಯದಲ್ಲಿರುವ ಅಲ್ಪ ಸಂಖ್ಯಾತರಿಗೆ ರಕ್ಷಣೆಯನ್ನು ಒದಗಿಸುವುದರಲ್ಲಿ ವಿಫಲರಾಗಿರುವುದಷ್ಟೇ ಅಲ್ಲದೆ ಅಲ್ಪ ಸಂಖ್ಯಾತರ ವಿರುದ್ಧ ಶಿವಸೇನೆ ಚಟುವಟಿಕೆಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರೋತ್ಸಾಹವನ್ನೂ ನೀಡುತ್ತಿದೆ ಎಂದು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷವು ಆಪಾದಿಸಿದೆ.

ಹಾಂಗ್‌ಕಾಂಗ್ ಚೀನಿ ಪ್ರದೇಶ: ಪೀಕಿಂಗ್ ವಾದ

ADVERTISEMENT

ಹಾಂಗ್‌ಕಾಂಗ್, ಆ. 20–ಹಾಂಗ್‌ಕಾಂಗ್ ಚೀನಿಯರಿಗೆ ಸೇರಿದ ಪ್ರದೇಶವೆಂದೂ, ಅದರೊಳಗೆ ಪ್ರವೇಶಿಸಲು ಚೀನಿಯರಿಗೆ ಸಂಪೂರ್ಣ ಸ್ವಾತಂತ್ರ್ಯವುಟೆಂದೂ ಚೀನ ಕಮ್ಯುನಿಸ್ಟ್ ಪಕ್ಷದ ಮುಖವಾಣಿಯಾದ ಪೀಕಿಂಗ್ ಪೀಪಲ್ಸ್ ಡೈಲಿ ಪತ್ರಿಕೆ ಇಂದು ಪ್ರಕಟಿಸಿತು.

ಚೀನ ಭೂಭಾಗದ ರೈತರು ಹಾಗೂ ಕಾರ್ಮಿಕರು ಇತ್ತೀಚೆಗೆ ಬ್ರಿಟಿಷ್ ಭೂಭಾಗದ ಮೇಲೆ ಅತಿಕ್ರಮಿಸಿ ಬಂದ ಬಗ್ಗೆ ಹಾಂಗ್‌ಕಾಂಗ್ ರೇಡಿಯೋ ಹಾಗೂ ಪತ್ರಿಕೆಗಳ ವರದಿಗಳನ್ನು ಕುರಿತು ಟೀಕಿಸುತ್ತಾ, ಈ ಪತ್ರಿಕೆಯು ಈ ರೀತಿ ಬರೆದಿರುವುದಾಗಿ ರೇಡಿಯೋ ಪೀಕಿಂಗ್ ವರದಿ ಮಾಡಿತು.

ಈ ವರ್ಷ ವೈಭವದ ದಸರಾ ಮೆರವಣಿಗೆ ಸರ್ಕಾರದ ನಿರ್ಧಾರ

ಬಳ್ಳಾರಿ, ಆ. 20– ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಅಕ್ಟೋಬರ್ 14ರಿಂದ ನಡೆಯುವ ರಾಜ್ಯದ ಅಂತರ್ರಾಷ್ಟ್ರೀಯ ಪ್ರವಾಸ ಸಪ್ತಾಹದ ಭಾಗವಾಗಿ ಈ ವರ್ಷ ಮೈಸೂರು ನಗರದಲ್ಲಿ ಎಲ್ಲಾ ವೈಭವಗಳೊಡನೆ ದಸರಾ ಹಬ್ಬ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯ ಸರ್ಕಾರದ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ ಡೈರೆಕ್ಟರ್ ಶ್ರೀ ಎಂ.ಡಿ. ಮರಿಪುಟ್ಟಣ್ಣ ಅವರು ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅರಮನೆಯ ಎಲ್ಲಾ ವೈಭವದ ಮತ್ತು ಅಲಂಕಾರಗಳೊಡನೆ ದಸರಾ ಮೆರವಣಿಗೆ ನಡೆಯಲಿದೆ.

ಅಣುಬಾಂಬ್ ತಯಾರಿಕೆ ಬೇಡ: ‘ಯುದ್ಧದಾಹೀ’ ಕೂಗಿಗೆ ಶ್ರೀಮತಿ ಪಂಡಿತ್ ವಿರೋಧ

ಬೆಂಗಳೂರು, ಆ. 20– ಭಾರತವು ಅಣುಬಾಂಬ್ ತಯಾರಿಗೆ ಮುಂದಾಗಬೇಕೆಂದು ರಾಷ್ಟ್ರದ ಕೆಲವೆಡೆ ಕೇಳಿ ಬರುತ್ತಿರುವ ‘ಯುದ್ಧದಾಹೀ ಕೂಗನನ್ನು’ ಶ್ರೀಮತಿ ವಿಜಯಲಕ್ಷ್ನಿ ಪಂಡಿತ್ ಅವರು ಇಂದು ಉಗ್ರವಾಗಿ ಖಂಡಿಸಿದರು.

ಆದೆಷ್ಟು ಧೈರ್ಯ ಅವರಿಗೆ? ಶಾಂತಿ, ತುಷ್ಟಿಯ ಸಮಾಜ ನಿರ್ಮಾಣದ ಪ್ರತಿಜ್ಞೆ ಸ್ವೀಕರಿಸಿದ ಭಾರತವನ್ನು ವಿನಾಶಕಾರಿ ಪಥಕ್ಕೆಳೆಯಲು ಯತ್ನಿಸುವ ಈ ಜನಕ್ಕೆ ಆದರ್ಶ ನೀತಿ ಒಂದೂ ಇಲ್ಲವೆ?’ ಕಂಪಿಸುವ ದನಿಯಿಂದ ಅವರು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷಾಂತರ ಪ್ರವೃತ್ತಿಯ ಕುತ್ತು

ನವದೆಹಲಿ, ಆ. 20– ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಶಾಸಕರ ಪಕ್ಷಾಂತರ ಕ್ರಮವು ಅಲ್ಲಿನ ಕಾಂಗ್ರೆಸ್ ಸರ್ಕಾರಗಳ ಪದಚ್ಯುತಿಗೆ ಕಾರಣವಾದರೂ ರಾಜಾಸ್ತಾನದಲ್ಲಿ ವಿರೋಧ ಪಕ್ಷಗಳ ಸರ್ಕಾರ ರಚನೆಯ ಪ್ರಯತ್ನಕ್ಕೆ ಅಡಚಣೆಯನ್ನುಂಟು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.