ADVERTISEMENT

ಶನಿವಾರ, 20–1–1968

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 19:30 IST
Last Updated 19 ಜನವರಿ 2018, 19:30 IST

ಅಮೆರಿಕದ ಅಣುಸ್ಫೋಟ: ಗಾಳಿಯಲ್ಲಿ ಅಣುವಿಕಿರಣ

ವಾಷಿಂಗ್ಟನ್, ಜ. 19– ಭೂಮ್ಯಂತರ್ಗತ ಅಣುಸ್ಫೋಟ ಪ್ರಯೋಗವನ್ನು ಅಮೆರಿಕವು ನಡೆಸಿದೆ. ಇದರಿಂದ ವಾತಾವರಣದಲ್ಲಿ ಅಣು ವಿಕಿರಣ ಕ್ರಿಯೆ ತಲೆದೋರಿದೆಯೆಂದು ಅಣು ಶಕ್ತಿ ಆಯೋಗ ನಿನ್ನೆ ತಿಳಿಸಿತು.

ಅಣುವಿಕಿರಣದಿಂದ ಆರೋಗ್ಯಕ್ಕೆ ಬಾಧಕವಿಲ್ಲವೆಂದು ಅದು ಹೇಳಿದೆ.

ADVERTISEMENT

ಚೀನಿ ಅಣುಸ್ಫೋಟ ವಿಫಲ: ಚೌ ಒಪ್ಪಿಗೆ

ಟೋಕಿಯೊ, ಜ. 19– ಕ್ರಿಸ್ಮಸ್ ದಿನಕ್ಕೆ ಮುನ್ನಿನ ದಿನ ಚೀನವು ನಡೆಸಿದ ಅಣ್ವಸ್ತ್ರ ಸ್ಫೋಟ ವಿಫಲವಾಯಿತೆಂಬ ವರದಿಗಳನ್ನು ಚೀನೀ ಪ್ರಧಾನಿ ಚೌ ಎನ್ ಲೈ ಅವರು ಪರೋಕ್ಷವಾಗಿ ಖಚಿತಗೊಳಿಸಿದ್ದಾರೆ. ಅಣ್ವಸ್ತ್ರ ಸ್ಫೋಟದ ವೈಫಲ್ಯವನ್ನು ಅಮೆರಿಕದ ಅಣು ಶಕ್ತಿ ಆಯೋಗವು ಸಾರಿತ್ತು ಎಂದು ಪೀಕಿಂಗಿನಿಂದ ಬಂದಿರುವ ಜಪಾನೀ ಪತ್ರಿಕಾ ವರದಿಗಳು ಹೇಳಿವೆ.

ನೂರು ತುಂಬಿದ ಅಠಾರಾ ಕಚೇರಿ (ಪ್ರಜಾವಾಣಿಗೆ ಪ್ರತ್ಯೇಕ)

ಬೆಂಗಳೂರು, ಜ. 19– ವಿಧಾನಸೌಧದ ಎದುರುಗಡೆಯಿರುವ ಅಠಾರಾ ಕಚೇರಿಗೆ ಈ ವರ್ಷ ನೂರು ತುಂಬುತ್ತದೆ.

680 ಅಡಿಗಳುದ್ದದ ಎರಡು ಅಂತಸ್ತುಗಳ ಈ ಕೆಂಪು ಕಟ್ಟಡದ ನಿರ್ಮಾಣ ಆರಂಭವಾದುದು 1864ರಲ್ಲಿ, ಮುಗಿದುದು 1868ರಲ್ಲಿ, ವೆಚ್ಚ 14 ಲಕ್ಷ ರೂ‍ಪಾಯಿಗಳು.

ಗಣರಾಜ್ಯ ದಿನೋತ್ಸವದಲ್ಲಿ ಭಾಗವಹಿಸಲು ಟಿಟೋ ಒಪ್ಪಿಗೆ

ನವದೆಹಲಿ, ಜ. 19– ಸೋಮವಾರದಂದು ಇಲ್ಲಿಗೆ ಭೇಟಿ ಕೊಡುವ ಯುಗೋಸ್ಲಾವ್ ಅಧ್ಯಕ್ಷ ಟಿಟೋ ಅವರು ಈ ಸಲದ ಗಣರಾಜ್ಯ ದಿನೋತ್ಸವದಲ್ಲಿ ಭಾಗವಹಿಸುವರು. ಅವರು ಇದಕ್ಕಾಗಿ ಮೂರು ದಿನ ಹೆಚ್ಚಿಗೆ ಇಲ್ಲಿರಲು ಒಪ್ಪಿದ್ದಾರೆ.

ಕೈಗಾರಿಕೆ ಕಮೀಷನರ್ ಹುದ್ದೆ ನಿರ್ಮಾಣ: ಇಲಾಖೆ ಸುಧಾರಣೆ ತೀರ್ಮಾನ

ಬೆಂಗಳೂರು, ಜ. 19– ಸರಕಾರಿ ಕೈಗಾರಿಕೆಗಳು ಕಡೆಯ ಪಕ್ಷ ಶೇಕಡಾ 10 ರಷ್ಟು ಲಾಭವನ್ನಾದರೂ ಗಳಿಸುವಂತಾಗಲು, ಕೈಗಾರಿಕೆ ಇಲಾಖೆಯನ್ನು ಸುಧಾರಿಸಲು ಅರ್ಥ ಹಾಗೂ ಕೈಗಾರಿಕೆ ಸಚಿವ ರಾಮಕೃಷ್ಣ ಹೆಗ್ಗಡೆ ಅವರು ನಿರ್ಧರಿಸಿದ್ದಾರೆ.

ಸರಕಾರಿ ಕೈಗಾರಿಕೆ ಸಂಸ್ಥೆಗಳ ಮೇಲ್ವಿಚಾರಣೆಗಾಗಿ ‘ಕೈಗಾರಿಕೆಗಳ ಕಮೀಷನರ್’ ಹೊಸ ಹುದ್ದೆಯನ್ನು ನಿರ್ಮಿಸುವುದೇ ಅಲ್ಲದೆ ಕೈಗಾರಿಕೆಗಳ ಕಾರ್ಯನಿರ್ವಾಹಕ ಮಂಡಳಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗುವುದು.

ನಗರಕ್ಕೆ ಉಪಪ್ರಧಾನಿ ಶ್ರೀ ಮುರಾರಜಿ

ಬೆಂಗಳೂರು, ಜ. 19– ಭಾರತದ ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ಇಂದು ಸಂಜೆ ವಿಶೇಷ ವಿಮಾನದಲ್ಲಿ ಪುನಾದಿಂದ ನಗರಕ್ಕಾಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.