ADVERTISEMENT

ಅಂಬೇಡ್ಕರ್, ಗಾಂಧಿ ಮಾರ್ಗ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 19:30 IST
Last Updated 22 ಡಿಸೆಂಬರ್ 2014, 19:30 IST

ಕನ್ನಡ ಭಾಷಾ ಮಾಧ್ಯಮ ಕಡ್ಡಾಯ ಆಗಬೇಕೆಂಬ ವಿಚಾರದಲ್ಲಿ ಹಿರಿಯ ಸಾಹಿತಿ ದೇವನೂರ ಮಹಾದೇವ ಅಪ್ಪಟ ಅಂಬೇಡ್ಕರ್ ವಾದಿಯಂತೆ ಕಂಡುಬಂದಿದ್ದಾರೆ. ಬಿ.ಆರ್. ಅಂಬೇಡ್ಕರ್ ಅವರ ನೇರ, ನಿಷ್ಠುರ, ಆತ್ಮವಿಶ್ವಾಸ, ಛಲ, ಸಂಘರ್ಷದ ಹೊಳಹು ಮಾತೃಭಾಷಾ ಮಾಧ್ಯಮದ ಹೋರಾಟದಲ್ಲಿ ನಿಚ್ಚಳವಾಗಿವೆ.

ಅದೇ ವೇಳೆಗೆ, ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ­ಯಾಗಿರುವ  ಹಿರಿಯ ಕವಿ ಸಿದ್ಧಲಿಂಗಯ್ಯ ಅವರು ಈ ವಿಚಾರದಲ್ಲಿ ಗಾಂಧಿ ಮಾರ್ಗವನ್ನು ಅನುಸರಿಸುವುದಾಗಿ ಹೇಳುತ್ತಿದ್ದಾರೆ. ದೇವನೂರರು ತಮ್ಮ ಲೇಖನವೊಂದರಲ್ಲಿ ಜಾತಿ ವ್ಯವಸ್ಥೆ ಮನೆಗೆ ಅಂಬೇಡ್ಕರ್ ಹೊರಗೆ ನಿಂತು ಕಲ್ಲು ಹೊಡೆದರು.

ಮಹಾತ್ಮ ಗಾಂಧಿ ಅವರು ಆ ಮನೆಯ ಒಳಗೇ ಇದ್ದು  ಮನೆಯ ಕಂಬಗಳನ್ನು ನಿಧಾನವಾಗಿ ಕೀಳುವ ಪ್ರಯತ್ನ ಮಾಡಿದ್ದರು ಎಂದು ಹೇಳುವ ಮೂಲಕ ಜಾತಿಪದ್ಧತಿ ವಿರುದ್ಧ ಈ ಇಬ್ಬರ ಹೋರಾಟದ ನಡುವಿನ ಸಾಮ್ಯತೆಯನ್ನು ಗುರುತಿಸಿದ್ದರು.

ಅದೀಗ ಮಾತೃಭಾಷಾ ಮಾಧ್ಯಮದ ವಿಚಾರ­ದಲ್ಲಿ ಮರುಕಳಿಸಿದಂತಾಗಿದೆ. ಗಾಂಧಿ ಮಾರ್ಗ­ವನ್ನು ಪರೋಕ್ಷವಾಗಿ ಸರಿ ಎಂದು ಸಮರ್ಥಿಸಿದ್ದ ದೇವನೂರರು, ಈಗ ತಾವೇ ಅಂಬೇಡ್ಕರ್ ಅವರ ಸಂಘರ್ಷದ ಹಾದಿಯನ್ನು ತುಳಿದಿರುವುದು ಆಶ್ಚರ್ಯವಾದರೂ ಸಮಂಜಸವಾದ ನಿಲುವು.
–-ಎಸ್.ಎಂ. ಮಂಜುಳಾ  ನಂಜನಗೂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.