ADVERTISEMENT

ಅಕ್ಷರ ಅರಸೊತ್ತಿಗೆ ಬೇಡ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 19:26 IST
Last Updated 20 ಏಪ್ರಿಲ್ 2017, 19:26 IST

ಪ್ರಧಾನಿ, ರಾಷ್ಟ್ರಪತಿ, ನ್ಯಾಯಮೂರ್ತಿ, ಕೇಂದ್ರ ಸಚಿವರು, ಲೋಕಸಭೆ ಸ್ಪೀಕರ್ ಸೇರಿದಂತೆ  ಯಾವುದೇ ಗಣ್ಯರು ತಮ್ಮ ವಾಹನಗಳಿಗೆ ಕೆಂಪುದೀಪ ಅಳವಡಿಸುವುದನ್ನು ನಿಷೇಧಿಸುವ ಮಹತ್ವದ ತೀರ್ಮಾನವನ್ನು ಕೇಂದ್ರ ಸರ್ಕಾರ ತಗೆದುಕೊಂಡಿದ್ದು ಸ್ತುತ್ಯರ್ಹ.

ಪ್ರಜಾಪ್ರಭುತ್ವ ವ್ಯವಸ್ಥೆಯಡಿ ‘ವಿಐಪಿ ಸಂಸ್ಕೃತಿ’ ಒಪ್ಪುವಂಥದ್ದಲ್ಲ. ಇದು  ಒಂದುರೀತಿ ಅರಸೊತ್ತಿಗೆಯನ್ನು ಮೆರೆಸುವ ಸಂಸ್ಕೃತಿ. ಸರ್ಕಾರ ಇದಕ್ಕೆ ಅಂತಿಮ ವಿದಾಯ ಹೇಳುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಹೆಚ್ಚಿನ ಬಲ ಬಂದಿದೆ.

ದೃಶ್ಯ ಮಾಧ್ಯಮಗಳಲ್ಲಿ ಕೆಲವೊಮ್ಮೆ ಮುಖ್ಯಮಂತ್ರಿ ಕುರಿತಂತೆ ‘ನಾಡ ದೊರೆ’, ‘ನಾಡ ಪ್ರಭು’ ಎಂದೋ ‘ರಾಜ್ಯ ಆಳಿದವರು’ ಎಂದೋ, ಕೆಲವು ನಾಯಕರ ಬಗ್ಗೆ ‘ಯುವರಾಜ’ ಎಂದೋ ಅತಿರಂಜಿತವಾಗಿ ವರದಿ ಮಾಡಲಾಗುತ್ತದೆ. ಈ ರೀತಿಯ ‘ಅಕ್ಷರ ಅರಸೊತ್ತಿಗೆ’ಯೂ ಕೊನೆಯಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ‘ಪ್ರಜೆಯೇ ಪ್ರಭು’ವಾಗಿದ್ದು ಎಲ್ಲರೂ ಅವರ ಸೇವಕರೇ ಎಂಬುದನ್ನ ಮನಗಾಣಬೇಕಿದೆ.
-ಪ್ರಶಾಂತ ಎಂ. ಕುನ್ನೂರ, ಜೇವರಗಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.