ADVERTISEMENT

ಅನುವಾದ ಮೈಲಿಗೆಯೇ?

ಡಾ.ತಿಪ್ಪೇಸ್ವಾಮಿ
Published 17 ನವೆಂಬರ್ 2017, 19:30 IST
Last Updated 17 ನವೆಂಬರ್ 2017, 19:30 IST

ಮೈಸೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ನೋಡಿ ಈ ಪತ್ರ ಬರೆಯುತ್ತಿದ್ದೇನೆ. ಇಲ್ಲಿ ಹತ್ತಾರು ಗೋಷ್ಠಿಗಳಿವೆ, ನೂರಾರು ಜನ ಪ್ರಬಂಧ, ಕವಿತೆಗಳನ್ನು ಮಂಡಿಸಲಿದ್ದಾರೆ. ಆದರೆ ಸಾಹಿತ್ಯ ಸಮ್ಮೇಳನದ ಆಯೋಜಕರಿಗೆ ಆಧುನಿಕ ಜಗತ್ತಿನಲ್ಲಿ ಅನುವಾದದ ಮಹತ್ವ ಏನೆಂಬುದು ಅರಿವಿಗೆ ಬಾರದಿರುವುದು ವಿಷಾದದ ಸಂಗತಿಯಾಗಿದೆ.

ವೈವಿಧ್ಯಮಯ ಸಂಸ್ಕೃತಿಯ ನಮ್ಮ ದೇಶದಲ್ಲಿ, ಧರ್ಮ, ದರ್ಶನ, ಸಾಹಿತ್ಯ, ವಿಜ್ಞಾನ, ಶಿಕ್ಷಣ, ತಂತ್ರಜ್ಞಾನ, ವಾಣಿಜ್ಯ, ವ್ಯವಹಾರ, ರಾಜಕೀಯ ಹೀಗೆ ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ಅನುವಾದವೆಂಬ ವಾಹಕವಿಲ್ಲದೇ ಹೋಗಿದ್ದಿದ್ದರೆ ಎಲ್ಲವೂ ನಿಂತ ನೀರಾಗುತ್ತಿತ್ತು. ಎಲ್ಲ ಕ್ಷೇತ್ರಗಳೂ ಕೂಪಗಳಾಗುತ್ತಿದ್ದವು, ದ್ವೀಪಗಳಾಗುತ್ತಿದ್ದವು. ಅನುವಾದಗಳಿಂದ ಇಂದು ವಿಶ್ವ ಕಿರಿದಾಗಿದೆ. ಅಪರಿಚಿತರು ಪರಿಚಿತರಾಗಿದ್ದಾರೆ.

ಕನ್ನಡದ ಸಂದರ್ಭದಲ್ಲಿ ಹೇಳಬೇಕೆಂದರೆ, ದೇಶದ ಹತ್ತು ಹಲವು ಭಾಷೆಗಳಿಂದ ನಿರಂತರವಾದ ಅನುವಾದಗಳು ಕನ್ನಡಕ್ಕೆ ಆಗುತ್ತಿವೆ. ಹಾಗೆಯೇ ಕನ್ನಡದಿಂದ ಆ ಭಾಷೆಗಳಿಗೆ ಆಗುತ್ತಿವೆ. ಹಾಗೆ ನೋಡಿದರೆ ಅನುವಾದ ಸಾಹಿತ್ಯವನ್ನು ಕುರಿತಾದ ಚರ್ಚೆಗೆಂದೇ ಪ್ರತ್ಯೇಕ ಗೋಷ್ಠಿಯನ್ನು ಇಡಬೇಕಿತ್ತು. ಇದು ಆಗದಿದ್ದಾಗ, ಎಲ್ಲಾದರೂ ಒಂದು ಕಡೆ ಅನುವಾದ ಸಾಹಿತ್ಯವನ್ನು ಕುರಿತು ಒಂದೆರಡು ಪ್ರಬಂಧಗಳನ್ನು ಮಂಡಿಸಲು ಅವಕಾಶ ವಿರಬೇಕಿತ್ತು. ನಮ್ಮಲ್ಲಿ ಅನುವಾದವನ್ನು ಕುರಿತು ಮಾತನಾಡುವ ವಿದ್ವಾಂಸರಿದ್ದಾರೆ.

ADVERTISEMENT

ಅವರನ್ನು ಗುರುತಿಸಿ ಆಹ್ವಾನಿಸಬೇಕಾಗಿತ್ತು. ಹೀಗೆ ಮಾಡದಿರುವುದು ಒಂದು ದೊಡ್ಡ ಲೋಪ. ಸಾಹಿತ್ಯ ಸಮ್ಮೇಳನಕ್ಕೆ ಅನುವಾದವೆಂದರೆ ಮೈಲಿಗೆಯೇ?

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.