ADVERTISEMENT

ಅಪಾಯ ತಪ್ಪಿದ್ದಲ್ಲ

ಸುರೇಶ್ ಕಂಬಳಿ, ಕೊಪ್ಪಳ
Published 2 ಜುಲೈ 2015, 19:30 IST
Last Updated 2 ಜುಲೈ 2015, 19:30 IST

ಸಹನಾ ಕಾಂತಬೈಲು ಅವರ ‘ನಿಸರ್ಗದ ನಿಯಮ’ (ವಾ.ವಾ. ಜುಲೈ 1) ಪ್ರತಿಕ್ರಿಯೆ ಓದಿ ಆಶ್ಚರ್ಯವಾಯ್ತು. ಹಾವುಗಳನ್ನು ಹಿಡಿಯುವುದು ಮೂರ್ಖತನ ಎಂದು ಅವರು ಹೇಳಿದ್ದಾರೆ. ರೋಗ ಬರಬಾರದೆಂದು ಲಸಿಕೆ ಹಾಕುವ ಹಾಗೆ ಕಚ್ಚಬಾರದೆಂದು ಹಾವುಗಳನ್ನು ಉರಗತಜ್ಞರು ನಿರ್ಜನ ಪ್ರದೇಶದಲ್ಲಿ ಬಿಡುತ್ತಾರೆ.

ನಿಸರ್ಗ ನಿಯಮವೆಂದು ನಾನು ನಿರ್ಲಕ್ಷ್ಯ ಮಾಡಿ ನನ್ನ ಪದವೀಧರ ತಮ್ಮನನ್ನು ಕಳೆದುಕೊಂಡಿದ್ದೇನೆ. ಹಾವು ಮನುಷ್ಯನಿಗೆ ಅಪಾಯ ತಂದೊಡ್ಡುವುದನ್ನು  ಅಲ್ಲಗಳೆಯುವ ಹಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.