ADVERTISEMENT

ಅರ್ಥವಿಲ್ಲದ ಆರತಕ್ಷತೆ

ಶಶಾಂಕ್ ಎನ್.ಎಂ., ದೊಡ್ಡಬಳ್ಳಾಪುರ
Published 25 ಮೇ 2015, 19:30 IST
Last Updated 25 ಮೇ 2015, 19:30 IST

ಆರತಕ್ಷತೆ ಎಂದರೆ ನವದಂಪತಿಯನ್ನು ಹಸೆಮಣೆ ಮೇಲೆ ಕೂರಿಸಿ ಆರತಿ ಬೆಳಗಿ, ಅಕ್ಷತೆ ಹಾಕಿ ಆಶೀರ್ವದಿಸುವ ಸಮಾರಂಭ. ಆದರೆ ಇಂದಿನ ದಿನಗಳಲ್ಲಿ ದಂಪತಿ ಆಗುವುದಕ್ಕಿಂತ ಮುಂಚೆಯೇ ಆರತಕ್ಷತೆ ಮಾಡಿ ಮುಗಿಸುತ್ತಾರೆ!

ಸಾಮಾನ್ಯವಾಗಿ ಮದುವೆಯ ಹಿಂದಿನ ದಿನವೇ ಆರತಕ್ಷತೆ ನಡೆಯುತ್ತಿದೆ. ಮದುವೆ ಆದ ಮೇಲೆ ಆರತಕ್ಷತೆ ಮಾಡುವುದು ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿ.  ಸಮಯ ಮತ್ತು ಅದಕ್ಕಿಂತ ಮುಖ್ಯವಾಗಿ ಹಣ ಉಳಿಸುವುದಕ್ಕಾಗಿ ಸಂಪ್ರದಾಯ, ಸಂಸ್ಕೃತಿಯನ್ನು ಗಾಳಿಗೆ ತೂರುವುದು ಹಾಗೂ ಅದನ್ನು ಹೇಗೆ ಬೇಕೋ ಹಾಗೆ ತಿರುಚುವುದರಲ್ಲ್ಲಿ ಅರ್ಥವಿದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT