ADVERTISEMENT

ಅಲೆದಾಟ ತಪ್ಪಿಸಿ

ಜಿ.ಬಿ.ಕಂಬಾಳಿಮಠ
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST

2005ಕ್ಕಿಂತ ಪೂರ್ವದಲ್ಲಿನ, ಇಸವಿಯಿಲ್ಲದ ರೂ500 ಹಾಗೂ ರೂ1000ದ  ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲು ರಿಸರ್ವ್‌ ಬ್ಯಾಂಕ್  ಸೆ. 30ರವರೆಗೆ ಕಾಲಮಿತಿಯನ್ನು ವಿಸ್ತರಿಸಿದೆ. ಗ್ರಾಹಕರು ಇಂಥ ನೋಟುಗಳನ್ನು ಬದಲಿಸಿಕೊಳ್ಳಲು ಅವಕಾಶವಿದೆ. ಆದರೆ ಸ್ಟೇಟ್‌ ಬ್ಯಾಂಕ್ ಹೊರತುಪಡಿಸಿ ಉಳಿದ ಬ್ಯಾಂಕುಗಳು ಇಂಥ ಹಳೆಯ ನೋಟುಗಳನ್ನು ಬದಲಾಯಿಸುತ್ತಿಲ್ಲ. ಬದಲಾಗಿ ಸ್ಟೇಟ್ ಬ್ಯಾಂಕ್‌ಗೆ ಹೋಗಿ ಎಂದು ಹೇಳಿ ಸಾಗಹಾಕುತ್ತವೆ.  ಜೊತೆಗೆ ಈ ಬ್ಯಾಂಕುಗಳ ಎಟಿಎಂಗಳಲ್ಲೂ ಇಂಥ ಹಳೆಯ ನೋಟುಗಳೇ ಬರುತ್ತವೆ.

ಸ್ಟೇಟ್‌ ಬ್ಯಾಂಕ್‌ ಅನ್ನು ಹುಡುಕಿಕೊಂಡು ನೋಟು ಬದಲಿಸಲು ಹೋದರೆ ಸಿಡಿಎಂ (ಕ್ಯಾಶ್ ಡಿಪಾಜಿಟ್‌ ಮಷೀನ್‌)ನಲ್ಲಿ ನಿಮ್ಮ ಖಾತೆಗೆ ಜಮಾ ಮಾಡಿ ಬದಲಾಯಿಸಿಕೊಳ್ಳಿ ಎಂದು ಸೂಚಿಸುತ್ತಾರೆ. ಹಾಗಾದರೆ ಖಾತೆ ಇಲ್ಲದ ಗ್ರಾಹಕ ಏನು ಮಾಡಬೇಕು? ಸೂಕ್ತ ಕ್ರಮ ಕೈಗೊಂಡು, ನೋಟುಗಳನ್ನು ಬದಲಿಸಲು ಗ್ರಾಹಕ ತನ್ನ ಕೆಲಸ ಬಿಟ್ಟು ಬ್ಯಾಂಕುಗಳಿಗೆ ಅಲೆಯುವುದನ್ನು ತಪ್ಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.