ADVERTISEMENT

ಆಗ ರಾಜ, ಈಗ...?

ಚಿಕ್ಕಜೋಗಿಹಳ್ಳಿ ನಾಗರಾಜ್‌, ಹೊನ್ನಾಳಿ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST

70ರ ದಶಕದ ಒಂದು ದಿನ. ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆ ಬರೆದು ಹೊರ ಬಂದೆ. ಕೆಲವು ಯುವಕರು ಒಂದು ಫೋಟೊ ಇಟ್ಟು ಅದರ ಮುಂದೆ ಭಾಷಣ ಮಾಡುತ್ತಿದ್ದರು.

ಗುಜರಾತ್‌ ಮತ್ತು ಬಿಹಾರದಲ್ಲಿ ವಿದ್ಯಾರ್ಥಿಗಳ ಮೇಲೆ ಆಗಿದ್ದ ಗೋಲಿಬಾರ್‌ ಖಂಡಿಸುತ್ತಿದ್ದರು. ಇಡೀ ದೇಶದ ಸಂಪತ್ತು  ಬೆರಳೆಣಿಕೆ ಜನರ ಕೈಯಲ್ಲಿದೆ (ನೆಹರೂ ಕುಟುಂಬ, ಟಾಟಾ ಕುಟುಂಬ, ಬಿರ್ಲಾ ಕುಟುಂಬ ಇತ್ಯಾದಿ) ಎಂದು ಭಾಷಣ ಮಾಡುತ್ತಾ ಜಯಪ್ರಕಾಶ ನಾರಾಯಣರ ಸಂಪೂರ್ಣ ಕ್ರಾಂತಿಗೆ, ಸಂಪತ್ತಿನ ಸಮಾನ ಹಂಚಿಕೆಗೆ ಬೆಂಬಲಿಸಿ ಎಂದು ಕರೆ ಕೊಡುತ್ತಿದ್ದರು. ‘ಸರ್ವಾಧಿಕಾರ ಬೇಕೋ, ಪ್ರಜಾಪ್ರಭುತ್ವ ಬೇಕೋ, ದಾಸ್ಯ ಬೇಕೋ, ಸ್ವಾತಂತ್ರ್ಯ ಬೇಕೋ’ ಎಂದು ಘೋಷಣೆಗಳು ಮೊಳಗುತ್ತಿದ್ದವು.

ಈ ಸಂಪೂರ್ಣ ಕ್ರಾಂತಿಗೆ (2ನೇ ಸ್ವಾತಂತ್ರ್ಯ ಹೋರಾಟಕ್ಕೆ) ಇನ್ನೇನು 50 ವರ್ಷ ತುಂಬಲಿದೆ. ಈ ಸಂಪೂರ್ಣ ಕ್ರಾಂತಿಯ, ಸಮಾನ ಹಂಚಿಕೆಯ ಮಂಥನದ ನಂತರ ಉದಯಿಸಿದ 600ಕ್ಕೂ ಹೆಚ್ಚು ಉದ್ಯಮಿಗಳನ್ನು ಬೆಂಗಳೂರು ‘ಇನ್‌ವೆಸ್ಟ್ ಕರ್ನಾಟಕ’ ವೇದಿಕೆಯಲ್ಲಿ ನೋಡಿ ಸಂತೋಷಪಟ್ಟೆನು.

ಸ್ವಾತಂತ್ರ್ಯ ಪೂರ್ವದಲ್ಲಿ 600 ರಾಜರಿದ್ದರು. ಈಗ ಉದ್ಯಮಿಗಳಿದ್ದಾರೆ (ಒಬ್ಬೊಬ್ಬ ಉದ್ಯಮಿಯೂ ಈ ದೇಶದ ಒಂದೊಂದು ಪ್ರಾಂತ್ಯವನ್ನು ಆಳಲಿ ಮುಂದೊಂದು ದಿನ). ಜೈ ಭಾರತ ಮಾತೆ! ಜೈ ಪ್ರಜಾಪ್ರಭುತ್ವ! ಜೈ ಸಮಾನತೆ! ಜೈ ಸಂಪೂರ್ಣ ಕ್ರಾಂತಿ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.