ADVERTISEMENT

ಆದೇಶ ಜಾರಿಯಾಗಲಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2017, 19:03 IST
Last Updated 12 ನವೆಂಬರ್ 2017, 19:03 IST

‘ನೇಮಕಾತಿ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಕೊಡುವುದು ನ್ಯಾಯಯುತ. ಆದರೆ ಬಡ್ತಿಯಲ್ಲಿ ಮೀಸಲಾತಿ ಸೂಕ್ತವಲ್ಲ’ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಆದರೆ ರಾಜ್ಯ ಸರ್ಕಾರ ಇದನ್ನು ಜಾರಿ ಮಾಡಲು ಮೀನಮೇಷ ಎಣಿಸುತ್ತಿರುವುದು ಸೂಕ್ತವಲ್ಲ.

‘ಬಡ್ತಿಯಲ್ಲಿ ಮೀಸಲಾತಿ ಬಂದಿರುವುದರಿಂದ ನನ್ನ ವಿದ್ಯಾರ್ಥಿಯೇ ನನಗೆ ಬಾಸ್ ಆಗಿದ್ದಾನೆ’ ಎಂದು ಎಂ. ನಾಗರಾಜ್ ಎಂಬ ಉದ್ಯೋಗಿ ಹೇಳಿಕೊಂಡಿದ್ದಾರೆ. ಇಂಥ ಹಲವು ಉದಾಹರಣೆಗಳು ರಾಜ್ಯದಲ್ಲಿ ಸಿಗಬಹುದು. ಅಂಥವರು ಮಾನಸಿಕವಾಗಿ ವ್ಯಸನ ಪಡುವುದು ಸಹಜ. ಮೀಸಲಾತಿ ಮೂಲಕ ಬಡ್ತಿ ಪಡೆದು ಬಂದವರಲ್ಲಿ ಅನುಭವ ಕಡಿಮೆ ಇರುತ್ತದೆ. ಇದು ಒಟ್ಟಾರೆ ಕೆಲಸ–ಕಾರ್ಯಗಳ ಮೇಲೂ ಪರಿಣಾಮ ಉಂಟುಮಾಡಬಹುದು. ಉದ್ಯೋಗಿಗಳ ಮನಸ್ಥಿತಿಯನ್ನು ಸರ್ಕಾರ ಅರ್ಥಮಾಡಿಕೊಂಡು, ನ್ಯಾಯಾಲಯ ನೀಡಿರುವ ತೀರ್ಪನ್ನು ಗೌರವಿಸಿ ಜಾರಿಗೆ ತರಬೇಕು.

–ಸಿ. ಸಿದ್ದರಾಜು ಆಲಕೆರೆ, ಮಂಡ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.