ADVERTISEMENT

ಇಂಗ್ಲಿಷ್‌ ಕಲಿಕೆ ತಪ್ಪಲ್ಲ

​ಪ್ರಜಾವಾಣಿ ವಾರ್ತೆ
Published 1 ಜುಲೈ 2016, 19:30 IST
Last Updated 1 ಜುಲೈ 2016, 19:30 IST

ಐರೋಪ್ಯ ಒಕ್ಕೂಟದಿಂದ ಇಂಗ್ಲಿಷ್‌ ಭಾಷೆಯನ್ನು ಹೊರಗಿಡಲು ಸಿದ್ಧತೆ ನಡೆದಿರುವಂತೆ, ಭಾರತಕ್ಕೆ ಇಂಗ್ಲಿಷ್‌ನಿಂದ ಮುಕ್ತಿ ದೊರೆಯುವುದು ಯಾವಾಗ ಎಂಬ ಉಡುಪಿ ಅನಂತೇಶ ರಾವ್ ಅವರ ಪತ್ರಕ್ಕೆ (ವಾ.ವಾ., ಜೂನ್‌ 30) ಈ ಪ್ರತಿಕ್ರಿಯೆ.

ಪ್ರಪಂಚದಾದ್ಯಂತ ಹರಡಿರುವ ಇಂಗ್ಲಿಷ್ ಭಾಷೆ ನಮಗೆ ಬೇಕೊ ಬೇಡವೊ  ಎಂಬುದು ಬೇರೆ ಮಾತು. ಆದರೆ ಅದು ಅವಶ್ಯಕ ಮಾಧ್ಯಮವಾಗಿಬಿಟ್ಟಿದೆ. ಭಾಷೆ ಯಾವುದಾದರೂ ಕಲಿಯುವುದು ಖಂಡಿತಾ ತಪ್ಪಲ್ಲ. ಐರೋಪ್ಯ ದೇಶಗಳಲ್ಲೂ ಈಗ ಇಂಗ್ಲಿಷ್ ಕಲಿಯುತ್ತಿದ್ದಾರೆ. ವ್ಯಾಮೋಹದಿಂದಲ್ಲ, ಅವಶ್ಯಕವೆಂದು. ಆದರೆ ಅಲ್ಲಿ ತಮ್ಮ ಮಾತೃಭಾಷೆಯನ್ನು ಯಾರೂ ಕಡೆಗಣಿಸುವುದಿಲ್ಲ. ಅಲ್ಲಿರುವ ನಮ್ಮ  ಭಾರತೀಯರೂ ಮೂರ್ನಾಲ್ಕು ಭಾಷೆಗಳನ್ನು ಸಲೀಸಾಗಿ  ಮಾತನಾಡಬಲ್ಲರು. ಜೊತೆಗೆ ಅವರು, ಮಕ್ಕಳನ್ನು ಕನ್ನಡದಲ್ಲೇ ಮಾತನಾಡಲು ಪ್ರೋತ್ಸಾಹಿಸುತ್ತಾರೆ.

ಇನ್ನು ನಮ್ಮ ಕನ್ನಡಿಗರಿಗೆ ಕರ್ನಾಟಕದಲ್ಲೇ ಕನ್ನಡ ಮಾತನಾಡುವುದು ಅವಮಾನ. ಎರಡು ಭಾಷೆಗಳನ್ನು ಕಲಿಯುವುದು ಖಂಡಿತ ಕಷ್ಟವಲ್ಲ. ಮಾತೃಭಾಷೆಯ ಬಗ್ಗೆ ಜನರಿಗೆ ಅಭಿಮಾನ ಇರಬೇಕಷ್ಟೆ.
- ಎಚ್‌.ವಿ. ಸುಮನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.