ADVERTISEMENT

ಇರಲಿ ಆಯ್ಕೆ ಸ್ವಾತಂತ್ರ್ಯ

ಮಹೇಶ್ ರುದ್ರಗೌಡರ, ವಿಜಾಪುರ
Published 3 ಆಗಸ್ಟ್ 2015, 19:30 IST
Last Updated 3 ಆಗಸ್ಟ್ 2015, 19:30 IST

ರಾಜ್ಯದಲ್ಲಿ ಜಾರಿಯಲ್ಲಿರುವ  ಅಘೋಷಿತ ಡಬ್ಬಿಂಗ್ ನಿಷೇಧವನ್ನು ಭಾರತೀಯ ಸ್ಪರ್ಧಾ ಆಯೋಗ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ (ಪ್ರ.ವಾ., ಜುಲೈ 30). ಸ್ಪರ್ಧೆಯನ್ನು ಹತ್ತಿಕ್ಕಿ ನೋಡುಗರ ಆಯ್ಕೆ ಸ್ವಾತಂತ್ರ್ಯ ಕಸಿದುಕೊಳ್ಳುವ ಪ್ರಯತ್ನ ಮಾಡಬಾರದು ಎಂದು ಹೇಳಿರುವುದು ಮನರಂಜನೆ, ಜ್ಞಾನ, ವಿಜ್ಞಾನವನ್ನು ಕನ್ನಡದಲ್ಲಿ ನೋಡಬಯಸುವ ಕೋಟ್ಯಂತರ ಕನ್ನಡಿಗರಿಗೆ ಸಿಕ್ಕ ಜಯ.

ಆಶ್ಚರ್ಯದ ಸಂಗತಿಯೆಂದರೆ, ಈ ತೀರ್ಪಿನ ನಂತರವೂ ಕೆಲವರು ಡಬ್ಬಿಂಗ್ ಮಾಡಲು ಬಿಡುವುದಿಲ್ಲ ಎನ್ನುತ್ತಾ ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನ್ಯಾಯಾಲಯದ ತೀರ್ಪು ಇವರಿಗೆ ಅನ್ವಯಿಸುವುದಿಲ್ಲವೇ? ಕಾನೂನಿಗಿಂತ ಇವರು ದೊಡ್ಡವರೇ?

ಡಬ್ಬಿಂಗ್ ಸಿನಿಮಾಗಳ ವಿರುದ್ಧ ಪ್ರತಿಭಟನೆ ಮಾಡುವ ಹಕ್ಕು ಇದ್ದರೂ ಸಾರಾಸಗಟು ಅದನ್ನು ನಿಷೇಧಿಸುವುದು ಸಂವಿಧಾನ ವಿರೋಧಿಯಾದುದು.  ಈಗಿನ ಕನ್ನಡ ಚಿತ್ರಗಳಲ್ಲಿ ಕನ್ನಡ ಸಂಸ್ಕೃತಿಯೇ ವಿಜೃಂಭಿಸುತ್ತಿದೆ ಎಂಬುದು ಎಷ್ಟು ಸುಳ್ಳೋ, ಡಬ್ಬಿಂಗ್‌ನಿಂದ ಕನ್ನಡ ಸಂಸ್ಕೃತಿ ನಾಶವಾಗುತ್ತದೆ ಎನ್ನುವುದೂ ಅಷ್ಟೇ ಸುಳ್ಳು. ಕೆಲವು ದಶಕಗಳ ಹಿಂದೆ ಹುಟ್ಟಿದ ಚಿತ್ರರಂಗದ ಏಳುಬೀಳಿನ ಜೊತೆ ಶತಮಾನಗಳಿಂದ ಬಂದ ಕನ್ನಡ ಸಂಸ್ಕೃತಿಯ ಹೋಲಿಕೆ ಮಾಡುವುದು ಮೂರ್ಖತನವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.