ADVERTISEMENT

ಈ ತಾರತಮ್ಯ ಯಾಕೆ?

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 19:30 IST
Last Updated 15 ಮಾರ್ಚ್ 2018, 19:30 IST

ಕಳೆದ ಒಂದು ವರ್ಷದಿಂದ ಹುಬ್ಬಳ್ಳಿ– ಮೈಸೂರು ನಡುವೆ ಓಡಾಡುವ ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೇನೆ. ನನಗಾದ ಅನುಭವವನ್ನು ಇಲ್ಲಿ ಹೇಳುತ್ತಿದ್ದೇನೆ.

ಹುಬ್ಬಳ್ಳಿಯಿಂದ ಸಂಜೆ 6 ಗಂಟೆಗೆ ಹೊರಡುವ ಹಂಪಿ ಎಕ್ಸ್‌ಪ್ರೆಸ್, ಬಳ್ಳಾರಿಗೆ ರಾತ್ರಿ 10 ಗಂಟೆಗೆ ತಲುಪುತ್ತದೆ. ರಿಸರ್ವೇಷನ್ ಬೋಗಿಗಳಲ್ಲಿ ಸಾಮಾನ್ಯ ಪ್ರಯಾಣಿಕರು ಹತ್ತಿ ಕುಳಿತರೆ ದಂಡ ವಿಧಿಸುತ್ತಾರೆ. ಆದರೆ ಬೆಂಗಳೂರು ತಲುಪಿದ ಮೇಲೆ, ಬೆಳಿಗ್ಗೆ 6 ರಿಂದ ಮೈಸೂರಿಗೆ ಹೋಗುವ ಈ ರೈಲಿನ ರಿಸರ್ವೇಷನ್ ಬೋಗಿಗಳಲ್ಲಿ ಸಾಮಾನ್ಯ ಪ್ರಯಾಣಿಕರು ನುಗ್ಗಿ, ಮಲಗಿದವರನ್ನು ಬಲವಂತದಿಂದ ಎಬ್ಬಿಸಿ, ತಾವು ಕುಳಿತು ಪ್ರಯಾಣಿಸುತ್ತಾರೆ. ಇವರಿಗೆ ರೈಲ್ವೆ ಅಧಿಕಾರಿಗಳು ದಂಡ ವಿಧಿಸುವುದಿಲ್ಲ.

ಮೈಸೂರಿನಿಂದ ಸಂಜೆ ಹೊರಡುವ ಈ ರೈಲಿನ ರಿಸರ್ವೇಷನ್ ಬೋಗಿಗಳಲ್ಲಿ ಸಾಮಾನ್ಯರು ಕುಳಿತು ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ರೈಲು ಬೆಳಿಗ್ಗೆ 6 ಗಂಟೆಗೆ ಬಳ್ಳಾರಿ ತಲುಪುತ್ತದೆ. ಇಲ್ಲಿಂದ ಹುಬ್ಬಳ್ಳಿಗೆ ಹೊರಟಾಗ ಸಾಮಾನ್ಯರು ರಿಸರ್ವೇಷನ್ ಬೋಗಿಗಳಲ್ಲಿ ಕುಳಿತರೆ ದಂಡ ವಿಧಿಸುತ್ತಾರೆ. ಬೆಂಗಳೂರಿನಿಂದ ಮೈಸೂರು ಮತ್ತು ಮೈಸೂರಿನಿಂದ ಬೆಂಗಳೂರು ನಡುವೆ ರಿಸರ್ವೇಷನ್ ಬೋಗಿಗಳಲ್ಲಿ ಸಾಮಾನ್ಯರು ಕುಳಿತು ಪ್ರಯಾಣಿಸಿದರೆ ದಂಡ ಯಾಕೆ ವಿಧಿಸುವುದಿಲ್ಲ? ಹುಬ್ಬಳ್ಳಿ– ಬಳ್ಳಾರಿ ನಡುವೆ ಮಾತ್ರ ಇಂಥವರಿಗೆ ಏಕೆ ದಂಡ ವಿಧಿಸುತ್ತಾರೆ? ಈ ತಾರತಮ್ಯ ಯಾರ ಗಮನಕ್ಕೂ ಬಂದಿಲ್ಲವೇ? ಇದಕ್ಕೆ ಪರಿಹಾರ ಎಲ್ಲಿದೆ?

ADVERTISEMENT

- ನಂದೀಶ್ವರ ದಂಡೆ, ಹೊಸಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.