ADVERTISEMENT

ಐಟಿಐ ಉಳಿಸಿ

ಎ.ವಿ.ಶಾಮರಾವ್‌
Published 10 ಫೆಬ್ರುವರಿ 2016, 19:48 IST
Last Updated 10 ಫೆಬ್ರುವರಿ 2016, 19:48 IST

ಹೂಡಿಕೆ ಸಮಾವೇಶ ಬೆಂಗಳೂರಿನಲ್ಲಿ ಈಗಷ್ಟೆ ಮುಗಿದಿದೆ. ಹೆಚ್ಚಿನ ಬಂಡವಾಳ ಬಂದು ಕೈಗಾರಿಕೆಗಳು ಹೆಚ್ಚಾಗಿ  ಹೆಚ್ಚು ಜನರಿಗೆ ಉದ್ಯೋಗ ಅವಕಾಶ ದೊರೆತರೆ ಈ ಸಮಾವೇಶದ ಆಶಯ ಈಡೇರಿದಂತಾಗುವುದು.

ಆದರೆ ಅತ್ಯಂತ ದುಃಖಕರವಾದ ಸಂಗತಿ ಒಂದಿದೆ. ನಗರದಲ್ಲೇ ಇರುವ ದೂರವಾಣಿ ಕಾರ್ಖಾನೆ (ಐಟಿಐ) ಇದಕ್ಕೆ ನಿದರ್ಶನ. ಇದು ದೇಶದ ಬೃಹತ್‌ ಕೇಂದ್ರೋದ್ಯಮಗಳಲ್ಲಿ ಒಂದು. ಈ ಹಿಂದೆ ಇದು ಪ್ರತಿಷ್ಠಿತ ಕಾರ್ಖಾನೆಯಾಗಿತ್ತು. ಇದರ ಘಟಕಗಳು ದೇಶದ ಅನೇಕ ಕಡೆ ಇವೆ. ಇದು ಆಗ ದೇಶದ ಬೆನ್ನೆಲುಬು ಎಂಬ ಹಿರಿಮೆಗೆ ಒಳಗಾಗಿತ್ತು.  ಆದರೆ ಈಗ ದಿನೇ ದಿನೇ ಕ್ಷೀಣಿಸುತ್ತಿದೆ.

ಬೆಂಗಳೂರಿನ ಐಟಿಐಯಲ್ಲಿ ಈಗ ಇರುವ ಕಾರ್ಮಿಕರ ಸಂಖ್ಯೆ ಸುಮಾರು 500 ರಿಂದ 600. ಆದರೆ ಇವರಿಗೆ ಯಾವುದೇ ರೀತಿಯ ಕೆಲಸವಿಲ್ಲ.

ರಾಜ್ಯದಲ್ಲಿನ ಎಚ್‌ಎಂಟಿ ಗಡಿಯಾರದ ಕಾರ್ಖಾನೆಯ ಟಿಕ್‌ ಟಿಕ್‌ ಸದ್ದು ನಿಂತಿದ್ದಾಗಿದೆ. ಈಗ ಟೆಲಿಫೋನ್‌ ಕಾರ್ಖಾನೆಯ  ಟ್ರಿಣ್‌ ಟ್ರಿಣ್‌ ಸದ್ದು ಯಾವ ಸಮಯದಲ್ಲಿ ನಿಲ್ಲುತ್ತದೋ ತಿಳಿಯದು.

ವಿಪ್ರೊ, ಇನ್ಫೊಸಿಸ್‌, ಟಿಸಿಎಸ್‌ನಂಥ ಸಂಸ್ಥೆಗಳು ಐ.ಟಿ.ಐ.ಗೆ ಜೀವ ತುಂಬಲು ನೆರವಾದರೆ ಈ ಮಹಾನ್‌ ಉದ್ಯಮ ಇನ್ನಷ್ಟು ದಿನ ಉಸಿರಾಡಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.