ADVERTISEMENT

ಕಂಡಕ್ಟರರು ಸಹಕರಿಸಲಿ

ಸತ್ಯಬೋಧ, ಬೆಂಗಳೂರು
Published 22 ಜೂನ್ 2015, 19:30 IST
Last Updated 22 ಜೂನ್ 2015, 19:30 IST

ನಗರ ಸಾರಿಗೆ ವಾಹನಗಳಲ್ಲಿ   ಹಿರಿಯ ನಾಗರಿಕರಿಗಾಗಿ ಅನುಕ್ರಮವಾಗಿ ನಾಲ್ಕು ಸ್ಥಾನಗಳನ್ನು ಕಾದಿರಿಸಲಾಗಿದೆ. ಆದರೆ ಅದರಲ್ಲಿ  ಯುವಕರೇ ಕುಳಿತು ಬಿಟ್ಟಿರುತ್ತಾರೆ. ಪಾಪ ವಯಸ್ಸಾದವರು  ಕಷ್ಟಪಟ್ಟು, ರಾಡ್ ಹಿಡಿದು ನಿಂತಿರುತ್ತಾರೆ.

ಹಿರಿಯರಿಗೆ ಚಿಕ್ಕವರು  ಸ್ಥಳ ಕಲ್ಪಿಸಬೇಕು, ಆದು ಹೋಗಲಿ,  ಅವರಿಗಾಗಿ  ಕಾದಿರಿಸಿದ ಸ್ಥಾನಗಳಲ್ಲೇ ಯುವಕರು  ಯಾವ ನಾಚಿಕೆಯೂ ಇಲ್ಲದೆ ಕುಳಿತಿರುತ್ತಾರೆ. ಹಿರಿಯರಿಗೆ ಸೀಟ್‌ ಬಿಟ್ಟುಕೊಡಿ ಎಂದು ಕೇಳಲೂ ಸಂಕೋಚ. ಇದೆಲ್ಲವನ್ನೂ ಗಮನಿಸಿಯೂ ಕಂಡಕ್ಟರುಗಳು ತಮಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ಇರುವುದು ಸರಿಯಲ್ಲ. ದಯವಿಟ್ಟು ಇಲ್ಲಿ ಕಂಡಕ್ಟರುಗಳು ಸೀಟು ಕೊಡಿಸುವಲ್ಲಿ ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.