ADVERTISEMENT

ಕಡಿವಾಣ ಬೇಕು

ಕೆ.ಆರ್.ಗಣೇಶ್, ಬೆಂಗಳೂರು
Published 1 ಸೆಪ್ಟೆಂಬರ್ 2015, 19:35 IST
Last Updated 1 ಸೆಪ್ಟೆಂಬರ್ 2015, 19:35 IST

ಡೀಸೆಲ್ ಬೆಲೆ ಲೀಟರ್‌ಗೆ ₹ 60ಕ್ಕೆ ಏರುವವರೆಗೂ ಇಂಧನದ ಬೆಲೆ ಹೆಚ್ಚಳವಾದ ಪ್ರತಿ ಬಾರಿಯೂ ರಾಜ್ಯ ರಸ್ತೆ ಸಾರಿಗೆ ನಿಗಮಗಳು  ಬಸ್‌ ಟಿಕೆಟ್ ದರ ಏರಿಸಿ ಪ್ರಯಾಣಿಕರನ್ನು ಬಾಧಿಸಿವೆ. ಈಗ ಡೀಸೆಲ್‌ ದರ ಲೀಟರ್‌ಗೆ ₹ 47ರ ಆಸುಪಾಸಿನಲ್ಲಿ  ಇದ್ದರೂ ಬಸ್‌ ಪ್ರಯಾಣ ದರ ಕಡಿಮೆ ಮಾಡುವ ಲಕ್ಷಣ ಮಾತ್ರ ಕಾಣುತ್ತಿಲ್ಲ.

ಬೇಕಿಲ್ಲದ ವೋಲ್ವೊ, ಮೈಲೇಜ್ ಕಡಿಮೆ ಕೊಡುವ ಬಸ್ಸುಗಳ ಖರೀದಿಯಿಂದ ಸಾರಿಗೆ ನಿಗಮಗಳಿಗೆ ನಷ್ಟ ಆಗುತ್ತಿದೆ. ಆ ಭಾರವನ್ನು ಸಾಮಾನ್ಯ ಜನರ ಹೆಗಲಿಗೆ ವರ್ಗಾಯಿಸಲಾಗುತ್ತಿದೆ. ನಗರದಲ್ಲಿ ರಾತ್ರಿ ವೇಳೆ ಪ್ರಯಾಣಕ್ಕೆ ಟಿಕೆಟ್‌ ದರ ಹೆಚ್ಚು. ಹಬ್ಬ ಹರಿದಿನಗಳ ಸಮಯದಲ್ಲಂತೂ ಬಸ್‌ ಪ್ರಯಾಣ ದರದ ಹೊಡೆತ ಹೇಳತೀರದು. ಈ ವಿಷಯದಲ್ಲಿ ಜನರ ಪರ ನಿಲ್ಲುವ ಮನಸ್ಸು ಯಾವ ರಾಜಕೀಯ ಪಕ್ಷಕ್ಕೂ ಇಲ್ಲ. ಈಗ ಮತ್ತೊಮ್ಮೆ  ದರ ಇಳಿಕೆ ಆಗಿದೆ. ಪ್ರಯಾಣ ದರ ಇಳಿಸುವಂತೆ ಜನರು ಸಾರಿಗೆ ನಿಗಮಗಳ ಮೇಲೆ ಒತ್ತಡ ಹೇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.